ಶಿವಮೊಗ್ಗ:ಜಿಲ್ಲಾಡಳಿತ, ಸಾರಿಗೆ ಇಲಾಖೆ ಹಮ್ಮಿಕೊಂಡಿದ್ದ ಮೋಟಾರ್ ಸೈಕಲ್ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಚಾಲನೆ ನೀಡಿದರು.
'ಯುವ ಶಕ್ತಿಯ ಮೂಲಕ ಬದಲಾವಣೆ ತರೋಣ' ಎಂಬ ಘೋಷಣೆಯಡಿ ಕಮಲಾ ನೆಹರೂ ಕಾಲೇಜು ಆವರಣದಿಂದ ಆರಂಭಗೊಂಡ ಈ ಜಾಥಾ ಗೋಪಿ ಸರ್ಕಲ್, ಅಮೀರ್ ಅಹ್ಮದ್ ವೃತ್ತ, ವೀರಭದ್ರೇಶ್ವರ ಚಿತ್ರಮಂದಿರ ಮಾರ್ಗದ ಮೂಲಕ ಕಾಲೇಜು ಆವರಣಕ್ಕೆ ತೆರಳಿತು.