ಕರ್ನಾಟಕ

karnataka

ETV Bharat / city

ಮತ ಜಾಗೃತಿ ಮೂಡಿಸಲು ಮಕ್ಕಳಿಂದ ಅಣುಕು ಮತದಾನ - undefined

ಮಕ್ಕಳ ಮೂಲಕ ಪೋಷಕರಲ್ಲಿ ಮತದಾನದ ಅರಿವು‌ ಮೂಡಿಸಲು ಅಣುಕು ಮತದಾನವನ್ನು ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಆಯೋಜನೆ ಮಾಡಲಾಯಿತು.

ಮಕ್ಕಳಿಂದ ಅಣುಕು ಮತದಾನ

By

Published : Apr 19, 2019, 11:57 PM IST

ಶಿವಮೊಗ್ಗ:ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಮತದಾರರಲ್ಲಿ ಜಾಗೃತಿಯನ್ನು ಮೂಡಿಸಲು ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಮಕ್ಕಳ ಅಣುಕು ಮತದಾನವನ್ನು ನಡೆಸಲಾಯಿತು.

ಮಕ್ಕಳ ಅಣುಕು ಮತದಾನವು ಸಾಮಾನ್ಯ ಮತದಾನದಂತೆಯೇ ನಡೆದಿದ್ದು, ಸಾಮಾನ್ಯ ಮತದಾನ ನಡೆಯುವ ಪ್ರತಿ ಹಂತವನ್ನು ಇಲ್ಲಿ ಅನುಸರಿಸಲಾಯಿತು. ಮೊದಲು ಮತದಾನಕ್ಕೆ ಬಂದ ಮಕ್ಕಳಿಗೆ ಬೂತ್ ಚೀಟಿ ನೀಡಿ, ಅವರು ಅದನ್ನು ತೆಗೆದುಕೊಂಡು ಬೂತ್ ಒಳಗೆ ಹೋಗಿ ಹೆಸರು ಹೇಳಿ ಕೈಗೆ ಶಾಯಿ ಹಾಕಿಸಿಕೊಂಡು ಮತದಾನ ಮಾಡಿ ಬಂದರು.

ಮಕ್ಕಳಿಂದ ಅಣುಕು ಮತದಾನ ಆಯೋಜನೆ

ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ಹಾಲ್​ನಲ್ಲಿ ಮತದಾನಕ್ಕೆ ಸಿದ್ಧತೆ ಮಾಡಲಾಗಿತ್ತು. ಇಲ್ಲಿ ಮತದಾನಕ್ಕೆ‌ ಮತಗಟ್ಟೆಯನ್ನು ಹಾಗೂ‌ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಡಿಸಿ ಜಿಲ್ಲಾ ಚುನಾವಣಾಧಿಕಾರಿಯಾಗಿ ಹಾಗೂ ಜಿಲ್ಲಾ ವೀಕ್ಷಕರಾಗಿ ಪೂರ್ಣಿಮರವರು ಕಾರ್ಯನಿರ್ವಹಿಸಿದರು. ಮತಗಟ್ಟೆಗೆ ಬಂದ ಮಕ್ಕಳು ತಮ್ಮ ಚೀಟಿಯನ್ನು ತೋರಿಸಿ, ಮತಗಟ್ಟೆಯ ಅಧಿಕಾರಿಗಳ ಪರಿಶೀಲನೆಯ ನಂತj ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.‌ ಈ ವೇಳೆ ಮತದಾನ ಮಾಡಲು ಇವಿಎಂ ಯಂತ್ರ ಬಳಸಲಾಗಿತ್ತು.

ಅಣುಕು ಮತದಾನವನ್ನು‌ 6 ರಿಂದ 18 ವರ್ಷದ ಒಳಗಿನ ಮಕ್ಕಳಿಗೆ ಆಯೋಜನೆ ಮಾಡಲಾಗಿತ್ತು.‌ 250 ಮಕ್ಕಳಿಗೆ ಅವಕಾಶ ಮಾಡಿ ಕೊಡಲಾಯಿತಾದರೂ ಪೋಷಕರ ಒತ್ತಡ ಮೇರೆಗೆ ಇತರೆ ಮಕ್ಕಳಿಗೂ ಅವಕಾಶ ದೊರೆಯಿತು.

ಮತದಾನದ ಪ್ರಕ್ರಿಯೆಯ ಬಗ್ಗೆ ಅರಿವು ಹಾಗು ಮಕ್ಕಳ ಮೂಲಕ ಪೋಷಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಈ ಅಣುಕು ಮತದಾನ ಸಹಾಯಕವಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದರು.‌ ಮಕ್ಕಳು ಮತದಾನ ಮಾಡಲು ತಮ್ಮ ಪೋಷಕರ ಜೊತೆ ಬಂದು ಮತ ಹಾಕಿ ಖುಷಿ ಪಟ್ಟರು.

For All Latest Updates

TAGGED:

ABOUT THE AUTHOR

...view details