ಶಿವಮೊಗ್ಗ: ಜಿಲ್ಲೆಯ ರಾಮಶೆಟ್ಟಿ ಪಾರ್ಕ್ ಬಳಿ ತೆರೆದಿರುವ ಕಾಳಜಿ ಗಂಜಿ ಕೇಂದ್ರಕ್ಕೆ ಆಗಮಿಸಿದ ಶಾಸಕ ಸಿ.ಟಿ ರವಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.
ಶಿವಮೊಗ್ಗದ ಕಾಳಜಿ ಕೇಂದ್ರಕ್ಕೆ ಶಾಸಕ ಸಿಟಿ ರವಿ ಭೇಟಿ... ಸಂತ್ರಸ್ತರ ಯೋಗಕ್ಷೇಮ ವಿಚಾರಣೆ - Shimoga flood areas
ಶಿವಮೊಗ್ಗ ಜಿಲ್ಲೆಯ ರಾಮಶೆಟ್ಟಿ ಪಾರ್ಕ್ ಬಳಿ ತೆರೆದಿರುವ ಕಾಳಜಿ ಗಂಜಿ ಕೇಂದ್ರಕ್ಕೆ ಶಾಸಕ ಸಿ.ಟಿ ರವಿ ಆಗಮಿಸಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ 252 ಮನೆಗಳು ಹಾಗೂ ಇಡೀ ಜಿಲ್ಲೆಯಲ್ಲಿ 721 ಮನೆಗಳು ಹಾಳಾಗಿದ್ದು, ಐದು ಜನ ಮೃತ ಪಟ್ಟಿದ್ದಾರೆ. ಮತ್ತು 22 ಜಾನುವಾರುಗಳು ಸಾವನ್ನಪ್ಪಿವೆ ಎಂದು ತಿಳಿಸಿದರು.
ಈಗಾಗಲೇ ಎಲ್ಲಾ ಕಡೆಗಳಲ್ಲೂ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಇಂತಹ ಪರಿಸ್ಥಿತಿಯನ್ನು ಎದುರಿಸಲು ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಏನನ್ನು ಮಾಡಬೇಕೋ ಅವುಗಳನ್ನು ಮಾಡಲಾಗುವುದು. ಹಾಗೆಯೇ ಪ್ರತಿ ಬಾರಿಯೂ ಇಂತಹ ಸಮಸ್ಯೆಗಳಿಗೆ ಒಳಗಾಗುವಂತಹ ಪ್ರದೇಶಗಳನ್ನು ಪಟ್ಟಿ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.