ಶಿವಮೊಗ್ಗ:ಶನಿವಾರದಂದು ನಾಪತ್ತೆಯಾಗಿದ್ದ ಸಾಗರದ ಪ್ರಕಾಶ್ ಟ್ರಾವೆಲ್ಸ್ನ ಮಾಲೀಕ ಇಂದು ಶವವಾಗಿ ಪತ್ತೆಯಾಗಿದ್ದಾರೆ. ಹೊಸನಗರ ತಾಲೂಕಿನ ಪಟಗುಪ್ಪೆ ಸೇತುವೆ ಬಳಿ ಶನಿವಾರದಂದು ಅವರ ಕಾರು ಹಾಗೂ ಮೊಬೈಲ್ ಪತ್ತೆಯಾಗಿತ್ತು. ಅನುಮಾನಗೊಂಡು ಪಟಗುಪ್ಪ ಸೇತುವೆ ಬಳಿ ಹುಡುಕಾಟ ನಡೆಸಲಾಗುತ್ತಿತ್ತು. ಇಂದು ಬೆಳ್ಳಂಬೆಳಗ್ಗೆ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರ ಶವ ದಡದ ಬಳಿ ಪತ್ತೆಯಾಗಿದೆ.
ಬಸ್ ಟ್ರಾವೆಲ್ಸ್ ನಡೆಸುತ್ತಿದ್ದ ಪ್ರಕಾಶ್ ಅವರು ಸಾಲದ ಸುಳಿಗೆ ಸಿಲುಕಿದ್ದರು. ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರಾ ಎಂಬ ಅನುಮಾನ ಮೂಡಿದೆ. ಕಳೆದ 20 ವರ್ಷಗಳಿಂದ ಬಸ್ ಟ್ರಾವೆಲ್ಲರ್ ಆಗಿದ್ದ ಪ್ರಕಾಶ್ ಅವರು ಕೊರೊನಾ ಲಾಕ್ಡೌನ್ ವೇಳೆ ನಷ್ಟಕ್ಕೀಡಾಗಿ ಸಾಲದ ಸುಳಿಗೆ ಸಿಲುಕಿದ್ದರು.