ಕರ್ನಾಟಕ

karnataka

ETV Bharat / city

ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರ ಶೀಘ್ರ ಬಂಧನ: ಸಚಿವ ನಾರಾಯಣಗೌಡ - ಹರ್ಷ ಕೊಲೆಯ ಬಗ್ಗೆ ಸಚಿವ ನಾರಾಯಣಗೌಡ ಪ್ರತಿಕ್ರಿಯೆ

ಹರ್ಷನನ್ನು ಕೊಲೆ ಮಾಡಿದವರು ಶಿವಮೊಗ್ಗದವರೇ ಅವರಲ್ಲಿ ಒಬ್ಬ ಖಾಸಿಫ್ ಎಂಬಾತನಾಗಿದ್ದಾನೆ. ಕೋರ್ಟ್ ಆವರಣದಲ್ಲಿ ಹರ್ಷ ಹಾಗೂ ಖಾಸಿಫ್ ನಡುವೆ ಗಲಾಟೆಯಾಗಿತ್ತು ಎಂಬ ಮಾಹಿತಿಯಿದೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.

minister-narayanagowda-on-harsha-murder-case
ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರ ಶೀಘ್ರ ಬಂಧನ: ಸಚಿವ ನಾರಾಯಣಗೌಡ

By

Published : Feb 22, 2022, 2:09 AM IST

ಶಿವಮೊಗ್ಗ:ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ‌ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿಕೆ ನೀಡಿದ್ದು, ಇನ್ನೂ ಮೂವರ ಮೇಲೆ ಶಂಕೆ ಇದ್ದು, ಅವರನ್ನು ಶೀಘ್ರವೇ ಬಂಧಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಕರಣದ ಕುರಿತಂತೆ ಮಾತನಾಡಿದ ಅವರು ಹರ್ಷ ಹತ್ಯೆ ಬೇಸರ ತಂದಿದೆ. ಡಿಸಿ, ಐಜಿ, ಎಸ್​​ಪಿ ಅವರೊಂದಿಗೆ ಇದೀಗ ಸಭೆ ನಡೆಸಿದ್ದೇನೆ. ಪ್ರಕರಣಕ್ಕೆ‌ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಇನ್ನೂ ಮೂವರ ಮೇಲೆ‌ ಶಂಕೆ ಇದ್ದು ಅವರನ್ನು ಶೀಘ್ರವೇ ಬಂಧಿಸಲಾಗುವುದು. ಮುಂದೆ ಈ ರೀತಿಯ ಘಟನೆಗಳು‌ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಸಚಿವ ನಾರಾಯಣಗೌಡ

ಪರಿಸ್ಥಿತಿ ಅವಲೋಕಿಸಿ ಕರ್ಫ್ಯೂ ಜಾರಿಗೊಳಿಸುತ್ತೇವೆ. ಸಣ್ಣಪುಟ್ಟ ದ್ವೇಷಗಳು ಇದ್ದೇ ಇರುತ್ತವೆ. ಇದರಿಂದಾಗಿ ಕಲ್ಲು ತೂರಾಟ‌ ನಡೆದಿದೆ. ಹೆಚ್ಚಿನ ಪೊಲೀಸ್ ಫೋರ್ಸ್ ತರಿಸಿಕೊಳ್ಳಲಾಗುತ್ತಿದೆ. ಗೃಹ ಸಚಿವರು ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹರ್ಷನನ್ನು ಕೊಲೆ ಮಾಡಿದವರು ಶಿವಮೊಗ್ಗದವರೇ ಅವರಲ್ಲಿ ಒಬ್ಬ ಖಾಸಿಫ್ ಎಂಬಾತನಾಗಿದ್ದಾನೆ. ಕೋರ್ಟ್ ಆವರಣದಲ್ಲಿ ಹರ್ಷ ಹಾಗೂ ಖಾಸಿಫ್ ನಡುವೆ ಗಲಾಟೆಯಾಗಿತ್ತು ಎಂಬ ಮಾಹಿತಿಯಿದೆ ಎಂದಿದ್ದಾರೆ.

ಕೆಲವು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿಚಾರಣೆ ಬಳಿಕ ಹತ್ಯೆಗೆ ನಿಖರ ಕಾರಣ ತಿಳಿದುಬರಲಿದೆ. ಮೃತನ ಮನೆಗೆ ತೆರಳಿ ಅವರಿಗೆ ಸಾಂತ್ವನ ಹೇಳಿದ್ದೇನೆ. ಹರ್ಷ ಒಬ್ಬನೇ ಮಗ. ಆತನ ಇಬ್ಬರು ಅಕ್ಕಂದಿರಿಗೆ ಮದುವೆಯಾಗಿದೆ. ಅಪ್ಪ-ಅಮ್ಮನನ್ನು ನೋಡಿಕೊಳ್ಳಬೇಕಾಗಿದ್ದ ಹರ್ಷ ಇದೀಗ ಮೃತನಾಗಿದ್ದಾನೆ. ಸರ್ಕಾರ ಹರ್ಷನ ಕುಟುಂಬದ ಜೊತೆಗೆ ನಿಲ್ಲುತ್ತದೆ.

ಇದನ್ನೂ ಓದಿ:ಹರ್ಷ ಕೊಲೆ ಪ್ರಕರಣ: 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಶಾಸಕ ಎಂಪಿ ರೇಣುಕಾಚಾರ್ಯ

ಅವರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಸರ್ಕಾರದೊಂದಿಗೆ ಮಾತನಾಡುತ್ತೇನೆ. ಕಿಡಿಗೇಡಿಗಳಿಗೆ ತಕ್ಕ ಪಾಠವನ್ನು ಕಲಿಸುವ ಕೆಲಸ ಮಾಡುತ್ತೇವೆ. ನೈಟ್ ಕರ್ಫ್ಯೂ ಜಾರಿ ಮಾಡಲೇಬೇಕಿದೆ. ಹಗಲು ಕಫ್ಯೂ ವಿಧಿಸುವ ಬಗ್ಗೆ ಅವಲೋಕನ‌ ನಡೆಸುತ್ತೇವೆ. ಕರ್ಫ್ಯೂ ವಿಧಿಸಿದರೆ ಆಸ್ಪತ್ರೆಗೆ ಬರುವವರು ಹಾಗೂ ಪ್ರಯಾಣ ಮಾಡುವವರಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆಯೂ ನಾವು ಅವಲೋಕನ‌ ಮಾಡಬೇಕಿದೆ.

ಪೊಲೀಸರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಟ್ಟು ಬಳಿಕ ಅವರ ಬಳಿ ಮಾಹಿತಿ ತೆಗೆದುಕೊಳ್ಳಬೇಕು. ಶೀಘ್ರವೇ ಪೊಲೀಸರು ಸ್ಥಿತಿಯನ್ನು ಹತೋಟಿಗೆ ತರಲಿದ್ದಾರೆ ಎಂದು ಚಿವ ಕೆ.ಸಿ.ನಾರಾಯಣ ಗೌಡ ಹೇಳಿದ್ದಾರೆ.

ABOUT THE AUTHOR

...view details