ಕರ್ನಾಟಕ

karnataka

ETV Bharat / city

ಮೆಗ್ಗಾನ್​ ರಾಜ್ಯದ ಮಾದರಿ ಆಸ್ಪತ್ರೆಯಾಗಿ ಮಾಡುವ ಜವಾಬ್ದಾರಿ ವೈದ್ಯರ ಮೇಲಿದೆ: ಸಚಿವ ಈಶ್ವರಪ್ಪ - Minister KS Eshwarappa visit to Meggan

ಜನರಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಬಂದರೆ ರೋಗ ವಾಸಿಯಾಗುತ್ತೆ ಎಂಬ ಮನೋಭಾವ ಬರುವಂತೆ ನೀವೆಲ್ಲರೂ ಕೆಲಸ ಮಾಡಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ವೈದ್ಯರಿಗೆ ಸಲಹೆ ನೀಡಿದರು.

Minister ks ishwarappa visit to shimoga meggan hospital
ಮೆಗ್ಗಾನ್ ಆಸ್ಪತ್ರೆಯನ್ನ ರಾಜ್ಯದ ಮಾದರಿ ಆಸ್ಪತ್ರೆ ಮಾಡುವ ಜವಾಬ್ದಾರಿ ವೈದ್ಯರ ಮೇಲಿದೆ: ಸಚಿವ ಕೆ.ಎಸ್.ಈಶ್ವರಪ್ಪ

By

Published : Jun 13, 2020, 8:20 PM IST

ಶಿವಮೊಗ್ಗ:ನಗರದ ಮೆಗ್ಗಾನ್ ಆಸ್ಪತ್ರೆಯನ್ನ ರಾಜ್ಯದ ಮಾದರಿ ಆಸ್ಪತ್ರೆಯಾಗಿ ಮಾಡುವ ಜವಾಬ್ದಾರಿ ಇಲ್ಲಿನ ವೈದ್ಯರ ಮೇಲಿದೆ. ಇದನ್ನು ಅರಿತು ವೈದ್ಯರು ಕೆಲಸ ಮಾಡಬೇಕಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವೈದ್ಯರಿಗೆ ಸಲಹೆ ನೀಡಿದ್ದಾರೆ.

ಮೆಗ್ಗಾನ್ ಆಸ್ಪತ್ರೆಯನ್ನ ರಾಜ್ಯದ ಮಾದರಿ ಆಸ್ಪತ್ರೆ ಮಾಡುವ ಜವಾಬ್ದಾರಿ ವೈದ್ಯರ ಮೇಲಿದೆ: ಸಚಿವ ಕೆ.ಎಸ್.ಈಶ್ವರಪ್ಪ

ಕೋವಿಡ್-19 ಪರಿಣಾಮ ಇಲ್ಲಿನ ಡಯಾಲಿಸಿಸ್ ವಿಭಾಗವನ್ನು ಖಾಸಗಿ ಆಸ್ಪತ್ರೆಗಳಿಗೆ ವರ್ಗಾಹಿಸಲಾಗಿತ್ತು. ಇಂದು ಪುನಃ ಮೆಗ್ಗಾನ್​ನಲ್ಲಿಯೇ ಡಯಾಲಿಸಿಸ್ ವಿಭಾಗ ಪ್ರಾರಂಭಿಸಲಾಯಿತು. ಬಳಿಕ ವೈದ್ಯರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಈಶ್ವರಪ್ಪ, ಜನಪ್ರತಿನಿಧಿಗಳು ಪದೇ ಪದೆ ಆಸ್ಪತ್ರೆಗೆ ಬರುತ್ತೇವೆ ಎಂದು ಬೇಸರ ಮಾಡಿಕೊಳ್ಳಬೇಡಿ. ನೀವು ಜನರಿಗೆ ಒಳ್ಳೆಯ ಸೇವೆ ನೀಡಿದರೆ, ಅದು ನಿಮ್ಮ ಕೆಲಸಕ್ಕೆ ನೀಡುವ ಗೌರವವಾಗಿದೆ. ನಿಮ್ಮ ಓದಿಗೆ ತಕ್ಕನಾದ ಸೇವೆಯನ್ನ ನೀವು ರೋಗಿಗಳಿಗೆ ನೀಡಬೇಕಿದೆ. ಮೆಗ್ಗಾನ್ ಆಸ್ಪತ್ರೆಯನ್ನ ರಾಜ್ಯದ ಮಾದರಿ ಆಸ್ಪತ್ರೆಯನ್ನಾಗಿ ಮಾಡುವ ಅವಶ್ಯಕತೆಯಿದ್ದು, ಇದಕ್ಕಾಗಿ ಒಂದು ವರ್ಷ ಬೇಕಾದರೂ ತೆಗೆದುಕೊಳ್ಳಿ ಎಂದರು.‌

ಹಲವು ರೋಗಿಗಳನ್ನ ಮೆಗ್ಗಾನ್​ಗೆ ಕಳುಹಿಸದೆ ಬೇರೆ ಕಡೆ ಕಳುಹಿಸುತ್ತಿದ್ದಾರೆ. ಇದು ನಮ್ಮಂತಹ ಜನಪ್ರತಿನಿಧಿಗಳಿಗೂ ಹಾಗೂ ವೈದ್ಯರಿಗೂ ಶೋಭೆ ತರುವುದಿಲ್ಲ. ಮೆಗ್ಗಾನ್ ಆಸ್ಪತ್ರೆಗೆ ಬಂದರೆ ರೋಗ ವಾಸಿಯಾಗುತ್ತೆ ಎಂಬ ಮನೋಭಾವ ಬರುವಂತೆ ನೀವೆಲ್ಲಾ ಕೆಲಸ ಮಾಡಬೇಕು ಎಂದು ವೈದ್ಯರಿಗೆ ಸಲಹೆ ‌ನೀಡಿದರು.

ABOUT THE AUTHOR

...view details