ಕರ್ನಾಟಕ

karnataka

By

Published : Jan 22, 2021, 1:29 PM IST

ETV Bharat / city

ಸ್ಫೋಟಗೊಂಡ ಕಲ್ಲುಗಣಿಗಾರಿಕೆ ಸಕ್ರಮವಾಗಿದೆ, ತನಿಖೆಯಿಂದ ಸತ್ಯಸಂಗತಿ ಹೊರಬರಲಿದೆ: ಸಚಿವ ಈಶ್ವರಪ್ಪ

ನಿನ್ನೆ ರಾತ್ರಿ ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ ನಡೆದ ಸ್ಫೋಟದ ಕುರಿತು ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ನಿನ್ನೆ ರಾತ್ರಿ ಬಂದ ಶಬ್ದವನ್ನು ನಾನು ನಾನು ಜೀವನದಲ್ಲಿಯೇ ಕೇಳಿಲ್ಲ. ಅಂತಗ ಶಬ್ದ ಬಂದಿದೆ. ಇಲ್ಲಿ ನಡೆದಿರುವ ಸ್ಫೋಟದ ಯಾವ ಕಾರಣಕ್ಕೆ ನಡೆದಿದೆ ಎಂಬುದನ್ನು ತನಿಖೆ ಮಾಡಿಸಲಾಗುವುದು ಎಂದರು.

minister-ks-eshwarappa-statement-about-gelatin-explosion-case
ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ:ಹುಣಸೋಡಿನ ಕಲ್ಲುಗಾರಿಕೆಯಲ್ಲಿ ಸ್ಫೋಟಗೊಂಡ ಕ್ರಷರ್ ಸಕ್ರಮವಾಗಿದೆ. ಬ್ಲಾಸ್ಟ್ ಯಾವ ಕಾರಣಕ್ಕೆ ನಡೆಯಿತು ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ಜಿಲ್ಲಾ‌ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಸ್ಫೋಟಗೊಂಡ ಕಲ್ಲುಗಣಿಗಾರಿಕೆ ಸಕ್ರಮವಾಗಿದೆ, ತನಿಖೆಯಿಂದ ಸತ್ಯಸಂಗತಿ ಹೊರಬರಲಿದೆ: ಸಚಿವ ಈಶ್ವರಪ್ಪ

ಹುಣಸೋಡಿನಲ್ಲಿ‌ ಸ್ಫೋಟಗೊಂಡ ಎಸ್.ಎಸ್.ಕ್ರಷರ್​ಗೆ ಭೇಟಿ ನೀಡಿ ಮಾತನಾಡಿದ ಅವರು, ನಿನ್ನೆ ರಾತ್ರಿ ಬಂದ ಶಬ್ದವನ್ನು ನಾನು ನಾನು ಜೀವನದಲ್ಲಿಯೇ ಕೇಳಿಲ್ಲ, ಅಂತಹ ಶಬ್ದ ಬಂದಿದೆ. ಇಲ್ಲಿ ನಡೆದಿರುವ ಸ್ಫೋಟ ಯಾವ ಕಾರಣಕ್ಕೆ ನಡೆದಿದೆ ಎಂಬುದನ್ನು ತನಿಖೆ ಮಾಡಿಸಲಾಗುವುದು. ಇಂತಹ ದೊಡ್ಡ ಸ್ಫೋಟ ಜಿಲಿಟಿನ್​ನಿಂದ ಬರಲು ಸಾಧ್ಯವಿಲ್ಲ. ಬೆಂಗಳೂರಿನಿಂದ ತನಿಖಾ ತಂಡ ಬಂದ ನಂತರ ಹೇಳಲಾಗುವುದು. ಇನ್ನು, ಎಷ್ಟು ಸಾವು ಸಂಭವಿಸಿದೆ, ಎಷ್ಟು ಜನ ಗಾಯಾಳು ಎಂದು ಹೇಳಲಾಗುತ್ತಿಲ್ಲ. ಸ್ಫೋಟದಲ್ಲಿ ದೇಹಗಳು ಚಿದ್ರವಾಗಿವೆ ಎಂದರು.

ಇದಕ್ಕೂ ಮುನ್ನ ಭೇಟಿ ನೀಡಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಇಂತಹ ಘಟನೆ ನಡೆಯಬಾರದಿತ್ತು. ಸ್ಫೋಟದ ತೀವ್ರತೆಯಿಂದ ಅಕ್ಕ-ಪಕ್ಕದ ಗ್ರಾಮದವರು ಬೆದರಿದ್ದಾರೆ. ದೊಡ್ಡಮಟ್ಟದ ಶಬ್ದ ಜಿಲ್ಲೆಯದ್ಯಾಂತ ಕೇಳಿದೆ. ಗಣಿಗಾರಿಕೆ ಅಕ್ರಮ - ಸಕ್ರಮ ನಡೆದಿರುವ ಕುರಿತು ತನಿಖೆ ನಡೆಸಬೇಕಿದೆ. ಸ್ಫೋಟ ಬೆಳಗ್ಗೆ ವೇಳೆ ನಡೆದಿದ್ದರೆ, ಇನ್ನೂ ಹೆಚ್ಚಿನ ಸಾವು-ನೋವು ಸಂಭವಿಸುತ್ತಿತ್ತು ಎಂದರು.

ABOUT THE AUTHOR

...view details