ಶಿವಮೊಗ್ಗ:ಉಪ ಚುನಾವಣೆಯಲ್ಲಿ ನಾವು ಕವರ್ನಲ್ಲಿ ಹಾಕಿ ಹಣ ಹಂಚಿದ್ದೇೆವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪ ಮಾಡುತ್ತಿದ್ದಾರೆ. ಡಿಕೆಶಿ ಹೀಗೆ ಹೇಳಿದ್ದಾರೆ ಎಂದರೆ ಅವರೇ ನೇರವಾಗಿ ಹಣ ಹಂಚಿದ್ದಾರೆ ಎಂದರ್ಥ ಎಂದು ಸಚಿವ ಕೆ ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾವು ಕದ್ದು ಮುಚ್ಚಿಕೊಟ್ಟರೆ, ಅವರು ನೇರವಾಗಿಯೇ ಹಂಚಿದ್ದಾರೆ ಎಂದರ್ಥವಾಗುತ್ತದೆ. ಈ ಬಗ್ಗೆ ಏನು ಉತ್ತರ ಕೊಡ್ತಾರೆ ಡಿ.ಕೆ. ಶಿವಕುಮಾರ್ ಎಂದು ಪ್ರಶ್ನಿಸಿದರು.
ಇವೆಲ್ಲಾ ತೋರಿಕೆಗೆ ಹೇಳುವ ಮಾತುಗಳು. ಎಲ್ಲಾ ರಾಜಕೀಯ ಪಕ್ಷಗಳು ಕೂಡ ಕೃಷ್ಣನ ತಂತ್ರಗಾರಿಕೆ ಮಾಡಿರುತ್ತವೆ. ನಾವು (ಬಿಜೆಪಿಯವರು) ಕೂಡ ತಂತ್ರಗಾರಿಕೆ ಮಾಡಿರುತ್ತೇವೆ. ಸುಮ್ಮನೆ ಅವರು ದುಡ್ಡು ಹಂಚಿರುತ್ತಾರೆ ಎಂದು ಹೇಳುವುದು ಸರಿಯಲ್ಲ ಎಂದರು.