ಕರ್ನಾಟಕ

karnataka

ETV Bharat / city

'ಕಾಶ್ಮೀರ್​ ಫೈಲ್ಸ್' ನೋಡಿದ ಬಳಿಕ ದುಃಖ ತಡೆಯಲಾಗುತ್ತಿಲ್ಲ: ಸಚಿವ ಕೆಎಸ್​ಈ

ಸಚಿವ ಕೆ.ಎಸ್​ ಈಶ್ವರಪ್ಪ ಅವರು ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್​​ ಫೈಲ್ಸ್' ಸಿನಿಮಾವನ್ನು ನಿನ್ನೆ ವೀರಭದ್ರೇಶ್ವರ ಥಿಯೇಟರ್​ನಲ್ಲಿ ವೀಕ್ಷಿಸಿ ನಂತರ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Minister KS Eshwarappa
ಸಚಿವ ಕೆ.ಎಸ್​ ಈಶ್ವರಪ್ಪ

By

Published : Mar 16, 2022, 8:40 AM IST

Updated : Mar 16, 2022, 9:42 AM IST

ಶಿವಮೊಗ್ಗ: ವಿಶ್ವದ ಎಲ್ಲ ದೇಶಗಳು ಕಾಶ್ಮೀರ್ ಫೈಲ್ಸ್ ಚಿತ್ರವನ್ನು ನೋಡಬೇಕು ಎಂದು ಸಚಿವ ಕೆ.ಎಸ್​ ಈಶ್ವರಪ್ಪ ಮನವಿ ಮಾಡಿದರು. ನಗರದ ವೀರಭದ್ರೇಶ್ವರ ಥಿಯೇಟರ್​ನಲ್ಲಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ವೀಕ್ಷಿಸಿದ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಚಿವ ಕೆ.ಎಸ್​ ಈಶ್ವರಪ್ಪ

ಕಾಶ್ಮೀರದಲ್ಲಿನ ಪಂಡಿತರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಕೇಳಿದ್ದೆ, ಓದಿದ್ದೆ. ಆದರೆ, ಈ ಚಿತ್ರವನ್ನು ನೋಡಿದ ಬಳಿಕ ದುಃಖವನ್ನು ತಡೆಯಲಾಗುತ್ತಿಲ್ಲ. ಪಂಡಿತರ ಮೇಲೆ ನಡೆದ ಕ್ರೌರ್ಯವನ್ನು ನೋಡಿದರೆ ಮನುಷ್ಯತ್ವವೇ ಇಲ್ಲ ಎನ್ನುವಂತೆ ನಡೆದುಕೊಂಡಿದ್ದಾರೆ ಎನಿಸುತ್ತಿದೆ.

ಇದನ್ನೂ ಓದಿ:'ದಿ ಕಾಶ್ಮೀರ್​​ ಫೈಲ್ಸ್' ಸಿನಿಮಾ ಮೆಚ್ಚಿಕೊಂಡ ಬಿಜೆಪಿ ನಾಯಕರು

ಭಾರತ ಶಾಂತಿಯ ದೇಶ ಎಂದು ಇಡೀ ವಿಶ್ವವೇ ಎಂದುಕೊಳ್ಳುತ್ತಿರುವ ಸಂದರ್ಭದಲ್ಲಿ ನಡೆದ ಈ ಕ್ರೌರ್ಯ ಅತ್ಯಂತ ಅಮಾನವೀಯ. ಇಷ್ಟು ಕ್ರೂರ ವ್ಯವಸ್ಥೆ ಆ ಸಂದರ್ಭದಲ್ಲಿ ಇತ್ತು ಎನ್ನುವುದನ್ನು ತಿಳಿಯಲು ಇಡೀ ವಿಶ್ವವೇ ಈ ಚಿತ್ರವನ್ನು ನೋಡಬೇಕು ಎಂದರು.

Last Updated : Mar 16, 2022, 9:42 AM IST

For All Latest Updates

ABOUT THE AUTHOR

...view details