ಕರ್ನಾಟಕ

karnataka

ETV Bharat / city

5 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಸಚಿವರು.. ಸಮಗ್ರ ಅಭಿವೃದ್ಧಿ ಮಾಡುವುದಾಗಿ ಈಶ್ವರಪ್ಪ ಭರವಸೆ.. - ಸರ್ಕಾರಿ ಶಾಲೆಗಳನ್ನು ದತ್ತು

ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಲು ಸರ್ಕಾರ ಚಿಂತಿಸಿದೆ. ಶಾಸಕರು, ಸಚಿವರು ಹಾಗೂ ಸಿಎಂ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು ಹಾಗೂ ಶಾಸಕರುಗಳಿಗೆ ಕೈಗಾಕೋದ್ಯಮಿಗಳು ತಮ್ಮ ಸಿಎಸ್​ಆರ್​ ಫಂಡ್‌ನ ಸರ್ಕಾರಕ್ಕೆ ನೀಡಲು ಮನವಿ ಮಾಡಿದರು..

minister-ks-eshwarappa-adopted-5-government-school
ಈಶ್ವರಪ್ಪ

By

Published : Feb 22, 2021, 5:09 PM IST

ಶಿವಮೊಗ್ಗ :ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ತಮ್ಮ ಕ್ಷೇತ್ರದ ಸೀಗೆಹಟ್ಟಿ, ‌ಬಿಬಿ ಸ್ಟ್ರೀಟ್, ಕೆಆರ್‌ಪುರಂ, ಗುರುಪುರ ಹಾಗೂ ಗಾಡಿಕೊಪ್ಪ ಸೇರಿ ಐದು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದು, ಅವುಗಳನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಶಾಸಕರು ಅವರ ಕ್ಷೇತ್ರದಲ್ಲಿ 3 ಸರ್ಕಾರಿ ಶಾಲೆಯನ್ನು, ಸಚಿವರು 5 ಶಾಲೆಗಳನ್ನು ಹಾಗೂ ಸಿಎಂ 10 ಶಾಲೆ ದತ್ತು ತೆಗೆದುಕೊಂಡು ಅಭಿವೃದ್ದಿ ಪಡಿಸಬೇಕು ಎಂಬ ಸರ್ಕಾರದ ಆದೇಶದ ಅನ್ವಯ ದತ್ತು ತೆಗೆದುಕೊಳ್ಳಲಾಗುತ್ತಿದೆ.

5 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಸಚಿವ ಕೆ ಎಸ್‌ ಈಶ್ವರಪ್ಪ..

ಸಿಗೇಹಟ್ಟಿಯ ಪ್ರಾಥಮಿಕ ಶಾಲೆಯ ಕಟ್ಟಡದ ಮೇಲುಗಡೆ, ಊಟದ ಹಾಲ್, ಲೈಬ್ರರಿ, ಸಭಾಂಗಣ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ಅಭಿವೃದ್ದಿಗೆ 50 ಲಕ್ಷ ರೂ. ಯೋಜನೆ ರೂಪಿಸಲಾಗಿದೆ. ಕಾರ್ಯಕ್ರಮಕ್ಕೆ ಫೆಬ್ರವರಿ 27ರಂದು ಗುದ್ದಲಿ ಪೂಜೆ ನಡೆಸಲು ತೀರ್ಮಾನಿಸಲಾಗಿದೆ. ಎಸ್​ಡಿಎಂಸಿಗೆ ಗುಣಮಟ್ಟದ ಕಾಮಗಾರಿ ನಡೆಸಲು ಸೂಚನೆ ನೀಡಿದರು.

ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಲು ಸರ್ಕಾರ ಚಿಂತಿಸಿದೆ. ಶಾಸಕರು, ಸಚಿವರು ಹಾಗೂ ಸಿಎಂ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು ಹಾಗೂ ಶಾಸಕರುಗಳಿಗೆ ಕೈಗಾಕೋದ್ಯಮಿಗಳು ತಮ್ಮ ಸಿಎಸ್​ಆರ್​ ಫಂಡ್‌ನ ಸರ್ಕಾರಕ್ಕೆ ನೀಡಲು ಮನವಿ ಮಾಡಿದರು.

ABOUT THE AUTHOR

...view details