ಶಿವಮೊಗ್ಗ: ಕರ್ನಾಟಕ ರಾಜ್ಯ ಅತ್ಯಂತ ಪ್ರತಿಭಾವಂತ ನಟನನ್ನು ಕಳೆದುಕೊಂಡು ಬರಿದಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಅವರು ನಟ ಪುನೀತ್ ರಾಜ್ ಕುಮಾರ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಚಂದನವನದ ಮೇರು ನಟ ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ಮರಣವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ನಿನ್ನೆ ಇದ್ರು, ಇಂದು ಅವರಿಲ್ಲ ಎಂದ್ರೆ ಯಾರಿಗೂ ನಂಬಲು ಆಗೋದಿಲ್ಲ. ಕರ್ನಾಟಕ ಚಿತ್ರರಂಗದಲ್ಲಿಯೇ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಸೌಮ್ಯ ವ್ಯಕ್ತಿ ಪುನೀತ್ ರಾಜಕುಮಾರ್. ಬಹಳ ಸಜ್ಜನ ಕಲಾವಿದ. ಅವರನ್ನು ಕಳೆದುಕೊಂಡು ನಾಡು ಬರಿದಾಗಿದೆ. ರಾಜ್ಯ ದುಃಖದಲ್ಲಿ ಮುಳುಗಿದೆ ಎಂದು ಕಂಬನಿ ಮಿಡಿದರು.