ಶಿವಮೊಗ್ಗ:ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಬಲವಾಗಿ ಒತ್ತಾಯಿಸುತ್ತಿದೆ. ಈ ಮಧ್ಯೆ ಮಾಧ್ಯಮಗಳ ಜೊತೆ ಮೂರು ದಿನ ಮಾತನಾಡದಿರಲು ಅವರು ತೀರ್ಮಾನಿಸಿದ್ದಾರೆ. ಆದ್ರೀಗ ದಿಢೀರ್ ಮಾಧ್ಯಮಗೋಷ್ಟಿ ಕರೆದು ಅಚ್ಚರಿ ಮೂಡಿಸಿದ್ದಾರೆ.
ಇದಕ್ಕೂ ಮುನ್ನ, ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಆಗುವ ವೇಳೆ ಮಾಧ್ಯಮದವರು ಸಚಿವರ ಪ್ರತಿಕ್ರಿಯೆಗೆ ಮುಂದಾದರು. ಆಗ ಸಚಿವರು ಮಾಧ್ಯಮದವರನ್ನು ಕಂಡು ನಾನು 3 ದಿನ ನಿಮ್ಮ ಜೊತೆ ಮಾತನಾಡಬಾರದು ಎಂದು ತೀರ್ಮಾನಿಸಿದ್ದೇನೆ ಎಂದರು. ಈ ವೇಳೆ ಮಾಧ್ಯಮದವರು ಯಾಕೆ ಸಾರ್? ಎಂದು ಕೇಳಿದ್ದಕ್ಕೆ ನಗುಮೊಗದಿಂದಲೇ ಯಾಕೆ ಅಂತಲೂ ಹೇಳಬಾರದು ಎಂದು ನಿರ್ಧರಿಸಿರುವೆ ಎಂದು ಹೇಳಿ ಹೊರಟು ಹೋದರು.