ಶಿವಮೊಗ್ಗ: ನಕಲಿ ದಾಖಲೆ ಸೃಷ್ಟಿಸಿ ಮನೆ ಮಾಲೀಕರಿಗೆ ಗೊತ್ತಿಲ್ಲದೇ ಅವರ ಮನೆಯನ್ನು ಬೇರೆಯವರಿಗೆ ಭೋಗ್ಯಕ್ಕೆ ಹಾಕಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಗೋಪಾಳದ ಶ್ರೀರಾಮ ನಗರದಲ್ಲಿ ಜಯಮ್ಮ ಎಂಬುವರು 2017ರಲ್ಲಿ ಸುರೇಶ್ ಎಂಬುವರಿಂದ ಸರ್ವೆ ನಂಬರ್ 8/1 ರಲ್ಲಿ 25× 50 ಅಡಿ ಎರಡು ಪೋಷನ್ ಹಂಚಿನ ಮನೆ ಖರೀದಿ ಮಾಡಿದ್ದರು.
ನಕಲಿ ದಾಖಲೆ ಸೃಷ್ಟಿಸಿ ಮನೆ ಭೋಗ್ಯಕ್ಕೆ ನೀಡಿದ ಭೂಪ: ವಿದ್ಯುತ್ ಬಿಲ್ನಿಂದ ಸತ್ಯ ಬಯಲು
ನಕಲಿ ದಾಖಲೆ ಸೃಷ್ಟಿಸಿ ಮನೆ ಮಾಲೀಕರಿಗೆ ಗೊತ್ತಿಲ್ಲದೇ ಅವರ ಮನೆಯನ್ನು ಬೇರೆಯವರಿಗೆ ಭೋಗ್ಯಕ್ಕೆ ಹಾಕಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ವಿದ್ಯುತ್ ಬಿಲ್ನಿಂದ ಈ ಸತ್ಯ ಬಯಲಿಗೆ ಬಂದಿದೆ.
ತುಂಗಾ ನಗರ ಪೊಲೀಸ್ ಠಾಣೆ
ಬಳಿಕ ತಮ್ಮ ಹೆಸರಿಗೆ ಮನೆಯನ್ನು ಹಾಗೂ ವಿದ್ಯುತ್ ಮೀಟರ್ ಸಹ ಬದಲಾಯಿಸಿಕೊಂಡಿದ್ದರು. ನಂತರ ಜಯಮ್ಮ ಪತಿಯ ಜತೆ ಬೆಂಗಳೂರಿಗೆ ಹೋಗಿ ನೆಲೆಸಿದ್ದರು. ಇದನ್ನೇ ಬಳಸಿಕೊಂಡ ಸಂತೋಷ್ ಎಂಬಾತ 2022ರ ಜನವರಿಯಲ್ಲಿ ಜಯಮ್ಮ ಅವರ ನಕಲಿ ಸಹಿ ಮಾಡಿದ ಛಾಪಾ ಕಾಗದ ತಯಾರು ಮಾಡಿ, ತನ್ನ ಹೆಸರಿಗೆ ವಿದ್ಯುತ್ ಮೀಟರ್ನ್ನು ಬದಲಾಯಿಸಿಕೊಂಡಿದ್ದಾನೆ.
ಅಲ್ಲದೇ ಸಂತೋಷ್ ಮನೆಯನ್ನು ಬೇರೆಯವರಿಗೆ ಭೋಗ್ಯಕ್ಕೆ ಹಾಕಿದ್ದಾನೆ. ವಿದ್ಯುತ್ ಬಿಲ್ ಸಂತೋಷ್ ಹೆಸರಿಗೆ ಬಂದಿದ್ದನ್ನು ಗಮನಿಸಿದ, ಜಯಮ್ಮ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.