ಕರ್ನಾಟಕ

karnataka

ETV Bharat / city

ವಿಚಾರಣೆಗೆ ಕರೆ ತಂದಿದ್ದ ವ್ಯಕ್ತಿ ಸಾವು: ಲಾಕಪ್ ಡೆತ್‌ ಆರೋಪ - undefined

ಪೊಲೀಸ್ ವಿಚಾರಣೆ ನಡೆಸುವಾಗ ವ್ಯಕ್ತಿವೋರ್ವ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ. ಇದು ಲಾಕಪ್ ಡೆತ್‌ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

ರೋಧಿಸುತ್ತಿರುವ ಮೃತನ ಕುಟುಂಬದವರು

By

Published : Jun 7, 2019, 4:37 AM IST

ಶಿವಮೊಗ್ಗ:ಪೊಲೀಸ್ ಠಾಣೆಗೆ ವಿಚಾರಣೆಗೆಂದು ಕರೆದುಕೊಂಡು ಬಂದಿದ್ದ ವ್ಯಕ್ತಿವೋರ್ವರು ವಿಚಾರಣೆ ನಡೆಸುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದು, ಲಾಕಪ್ ಡೆತ್‌ ಎಂಬ ಶಂಕೆ ವ್ಯಕ್ತವಾಗಿದೆ.

ಭದ್ರಾವತಿ ತಾಲೂಕು ಆಗರದಹಳ್ಳಿ ಕ್ಯಾಂಪ್​ನ ನಿವಾಸಿ ಬಾಲೇಶ್ (55) ಮೃತಪಟ್ಟವರು. ಇವರನ್ನು ವಿಚಾರಣೆಗೆಂದು ಹೊಳೆಹೊನ್ನೂರು ಪೊಲೀಸರು ಮನೆಯಿಂದ ಕರೆದುಕೊಂಡು ಬಂದಿದ್ದಾರೆ. ನಂತರ ಹೆಚ್ಚಿನ ವಿಚಾರಣೆಗೆಂದು‌ ಜಿಲ್ಲಾ ವರಿಷ್ಟಾಧಿಕಾರಿ ಡಾ.ಅಶ್ವಿನಿ ಅವರ ಮುಂದೆ ಹಾಜರುಪಡಿಸಿದ್ದಾರೆ. ನಗರದ ಡಿಎಆರ್ ಹಾಲ್​ನಲ್ಲಿ ವಿಚಾರಣೆ ನಡೆಸುವಾಗ ಬಾಲೇಶ್ ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸುವಷ್ಟರಲ್ಲಿ ಬಾಲೇಶ್​ ಅವರ ಉಸಿರು ನಿಂತಿದೆ.

ರೋಧಿಸುತ್ತಿರುವ ಮೃತನ ಕುಟುಂಬದವರು

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಡಿ ಓಸಿ ಬರೆಯುವ ಹಾಗೂ ಇಸ್ಪೀಟ್​ ಆಡುವವರನ್ನು ವಿಚಾರಣೆಗೆ ಕರೆಯಿಸಿಲಾಗಿತ್ತು. ಪೊಲೀಸರು ವಿಚಾರಣೆ ನೆಪದಲ್ಲಿ ಬಾಲೇಶನನ್ನು ಕರೆತರಲಾಗಿತ್ತು. ಇದು ಲಾಕಪ್ ಡೆತ್ ಎಂದು ಮೃತನ ಸಂಬಂಧಿಕರು ಹಾಗೂ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಇನ್ನು ಮೃತನ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು.

For All Latest Updates

TAGGED:

ABOUT THE AUTHOR

...view details