ಶಿವಮೊಗ್ಗ: ಹಲ್ಲು ನೋವೆಂದು ಸ್ನೇಹಿತನ ಕ್ಲಿನಿಕ್ಗೆ ಹೋದ ವ್ಯಕ್ತಿ ಅಲ್ಲೇ ಮೃತಪಟ್ಟಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ಜನ್ನಾಪುರದ ನಿವಾಸಿ ಮೋಹನ್ ಮೂರ್ತಿ(43) ಮೃತಪಟ್ಟವರು.
''ಮೋಹನ್ ಮೂರ್ತಿ ಎಂಬುವವರು ಶ್ರೇಯಸ್ ಕ್ಲಿನಿಕ್ಗೆ ಹಲ್ಲು ನೋವೆಂದು ಹೋಗಿದ್ದರು. ಈ ವೇಳೆ ಮೂರ್ತಿಯವರಿಗೆ ದಂತ ವೈದ್ಯ ಸತೀಶ್ ಚಂದನ್ ಹಲ್ಲು ಕೀಳಲು ಅನಸ್ತೇಶಿಯ ನೀಡಿದ್ದರು. ತಕ್ಷಣ ಅಸ್ವಸ್ಥಗೊಂಡ ಮೋಹನ್ ಮೂರ್ತಿ ಸಾವನ್ನಪ್ಪಿದ್ದಾರೆ'' ಎಂದು ಮೃತರ ಸಂಬಂಧಿಕರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅನಸ್ತೇಶಿಯಾ ಓವರ್ ಡೋಸ್ನಿಂದಾಗಿಯೇ ಮೋಹನ್ ಮೂರ್ತಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.