ಕರ್ನಾಟಕ

karnataka

ETV Bharat / city

ಹೆಂಡತಿಯ ತಂಗಿಯನ್ನೇ ಗರ್ಭಿಣಿಯನ್ನಾಗಿಸಿದ ವ್ಯಕ್ತಿ: ಹೆರಿಗೆ ಬಳಿಕ ಪ್ರಕರಣ ಬೆಳಕಿಗೆ - ಹೆಂಡತಿಯ ಸಹೋದರಿಯನ್ನು ಗರ್ಭಿಣಿಯಾಗಿಸಿದ ವ್ಯಕ್ತಿ ಬಂಧನ

ತನ್ನ ಮನೆಯಲ್ಲೇ ಇದ್ದ ಪತ್ನಿಯ ತಂಗಿ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

rape
rape

By

Published : Feb 6, 2022, 4:39 AM IST

ಶಿವಮೊಗ್ಗ:ಪತ್ನಿಯ ತಂಗಿ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿದ ಆರೋಪಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಶಿವಮೊಗ್ಗ ತಾಲೂಕು ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಪ್ರವೀಣ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರವೀಣ ಹೋಟೆಲ್ ನಡೆಸುತ್ತಿದ್ದನು. ಮದುವೆಯಾದ ಬಳಿಕ ತನ್ನ ಹೆಂಡತಿಯ ತಂಗಿಯನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು ಓದಿಸುತ್ತಿದ್ದನು.

ಮಗುವಿನ ಸಾವು ಪ್ರವೀಣ ಕೃತ್ಯ ಬಯಲು:
ಕಳೆದ ಐದಾರು ವರ್ಷಗಳಿಂದ ಮನೆಯಲ್ಲೇ ಇದ್ದ ತನ್ನ ಪತ್ನಿ ತಂಗಿಯ ಮೇಲೆ ಕಣ್ಣಿಟ್ಟಿದ್ದ ಪ್ರವೀಣ ಬಲವಂತದಿಂದ ಕಳೆದ ಒಂದು ವರ್ಷದಿಂದ ದೈಹಿಕ‌ ಸಂಪರ್ಕ ಬೆಳೆಸಿದ್ದ. ಆಕೆ ಹೊಟ್ಟೆ ನೋವು ಅಂತ ಹೇಳಿದಾಗ ಪೋಷಕರು ಆಸ್ಪತ್ರೆಗೆ ಕರೆದು‌ಕೊಂಡು ಹೋದಾಗ ಐದು ತಿಂಗಳ ಗರ್ಭಿಣಿ‌ ಎಂಬುದು ಗೊತ್ತಾಗಿತ್ತು. ಇದರಿಂದ ಹೆದರಿದ ಪೋಷಕರು ಆಕೆಯನ್ನುತಮ್ಮ‌ ಮನೆಗೆ ಕರೆದು‌ಕೊಂಡು ಹೋಗುತ್ತಾರೆ. ನಂತರ ಎಂಟು ತಿಂಗಳಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗುತ್ತದೆ. ಅವಧಿಗೂ ಮುನ್ನ ಜನಿಸಿದ ಮಗುವನ್ನು ಖಾಸಗಿ ಆಸ್ಪತ್ರೆಯಿಂದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗುತ್ತದೆ. ಆದ್ರೆ ನಂತರ ಮಗು ಸಾವನ್ನಪ್ಪುತ್ತದೆ.

ಆಸ್ಪತ್ರೆಗೆ ದಾಖಲಿಸಿದ ವೇಳೆ ಅಪ್ತಾಪ್ತೆಯ ವಯಸ್ಸು 19 ಎಂದು ದಾಖಲಿಸಲಾಗಿರುತ್ತದೆ. ಆಧಾರ ಸಂಖ್ಯೆಯನ್ನು ತಪ್ಪಾಗಿ ನೀಡಲಾಗಿರುತ್ತದೆ. ಆಸ್ಪತ್ರೆಯಲ್ಲಿ ಕೇವಲ ಒಂದೇ ದಿನಕ್ಕೆ ಮಗು ಸಾವನ್ನಪ್ಪುತ್ತದೆ. ಬಳಿಕ ಅಪ್ತಾಪ್ತೆ ಜೊತೆ ಪೋಷಕರು ಅಲ್ಲಿಂದ ಪರಾರಿಯಾಗುತ್ತಾರೆ. ಈ ವಿಷಯ ಪೊಲೀಸರಿಗೆ ತಿಳಿಯುತ್ತದೆ. ಆದರೆ ಆಸ್ಪತ್ರೆಯಲ್ಲಿ ತಪ್ಪು ವಿಳಾಸ ನೀಡಿರುತ್ತಾರೆ. ಆದ್ರೂ ಪೊಲೀಸರು ವಿಳಾಸ ಪತ್ತೆ ಹಚ್ಚಿ ಸತ್ಯಾಂಶ ಬಯಲು ಮಾಡಿದ್ದಾರೆ. ಪ್ರವೀಣನ ವಿರುದ್ಧ ಕೇಸು ದಾಖಲಿಸಿ ಬಂಧಿಸಲಾಗಿದೆ.

(ಇದನ್ನೂ ಓದಿ: ವಿಡಿಯೋ: BJP ಕಾರ್ಯಕರ್ತರಿಗೆ ಪ್ರಣಾಳಿಕೆ ನೀಡಲು ರೋಡ್​ಶೋ ನಿಲ್ಲಿಸಿದ ಪ್ರಿಯಾಂಕಾ!)

ABOUT THE AUTHOR

...view details