ಶಿವಮೊಗ್ಗ:ದೇಶಾದ್ಯಂತ ಲಾಕ್ಡೌನ್ ಆದೇಶ ಹಿನ್ನೆಲೆ, ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಆದರೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡುತ್ತಿದ್ದ 25ಕ್ಕೂ ಹೆಚ್ಚು ಬೈಕ್ಗಳನ್ನ ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾಕ್ಡೌನ್ ನಿಯಮ ಉಲ್ಲಂಘನೆ: 25ಕ್ಕೂ ಹೆಚ್ಚು ಬೈಕ್ಗಳನ್ನ ವಶಕ್ಕೆ ಪಡೆದ ಪೊಲೀಸರು - More than 25 bicyclists in custody
ಲಾಕ್ಡೌನ್ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡುತ್ತಿದ್ದ 25ಕ್ಕೂ ಹೆಚ್ಚು ಬೈಕ್ಗಳನ್ನ ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾಕ್ಡೌನ್ ನಿಯಮ ಉಲ್ಲಂಘನೆ: 25ಕ್ಕೂ ಹೆಚ್ಚು ಬೈಕ್ಗಳನ್ನ ವಶಕ್ಕೆ ಪಡೆದ ಪೊಲೀಸರು
ಅವಶ್ಯಕ ವಸ್ತುಗಳನ್ನು ತರಲು ಮಾತ್ರ ಮನೆಯಿಂದ ಹೊರಬೇಕು. ಇಲ್ಲವಾದಲ್ಲಿ ಸುಮ್ಮನೆ ಮನೆಯಲ್ಲಿ ಇರಬೇಕು ಎಂದು ಸೂಚಿಸುತ್ತಿದ್ದರೂ ಸಹ ಅದನ್ನು ಪರಿಗಣಿಸದೇ ಅನಗತ್ಯವಾಗಿ ಬೈಕ್ನಲ್ಲಿ ಸುತ್ತುತ್ತಿದ್ದ ಹಾಗೂ ಅಲ್ಲಲ್ಲಿ ನಿಂತು ಮಾತನಾಡುತ್ತಿದ್ದ 25ಕ್ಕೂ ಹೆಚ್ಚು ಬೈಕ್ಗಳನ್ನ ವಶಕ್ಕೆ ಪಡೆದು ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ರಸ್ತೆಯಲ್ಲಿ ವಿನಾ ಕಾರಣ ಸುತ್ತುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.