ಶಿವಮೊಗ್ಗ: ಲಾಕ್ಡೌನ್ ನಿಯಮ ಬಿಗಿಗೊಳಿಸದಿದ್ದರೆ ಹಸಿರು ವಲಯ ಇರುವ ಶಿವಮೊಗ್ಗ ಕೆಂಪು ವಲಯಕ್ಕೆ ಹೋಗುವ ಅಪಾಯವಿದೆ. ಹೀಗಾಗಿ ಜಿಲ್ಲೆಯಲ್ಲಿ ಲಾಕ್ಡೌನ್ ಮತ್ತಷ್ಟು ಬಿಗಿಗೊಳಿಸಬೇಕು ಎಂದು ಮಾಜಿ ಶಾಸಕರ ವೇದಿಕೆಯ ರಾಜ್ಯಾಧ್ಯಕ್ಷ ಹೆಚ್.ಎಂ.ಚಂದ್ರಶೇಖರಪ್ಪ ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ಮತ್ತಷ್ಟು ದಿನ ಲಾಕ್ಡೌನ್ ಬಿಗಿಗೊಳಿಸಿ: ಹೆಚ್.ಎಂ.ಚಂದ್ರಶೇಖರಪ್ಪ ಒತ್ತಾಯ
ಲಾಕ್ಡೌನ್ ಸಡಿಲಿಕೆ ಮಾಡಿದರೆ, ಹಸಿರು ವಲಯ ಇರುವ ಶಿವಮೊಗ್ಗ ಕೆಂಪು ವಲಯಕ್ಕೆ ಹೋಗುವ ಅಪಾಯವಿದೆ. ಹೀಗಾಗಿ ಜಿಲ್ಲಾಡಳಿತ ಲಾಕ್ಡೌನ್ ಮತ್ತಷ್ಟು ಬಿಗಿಗೊಳಿಸಬೇಕು ಎಂದು ಮಾಜಿ ಶಾಸಕರ ವೇದಿಕೆಯ ರಾಜ್ಯಾಧ್ಯಕ್ಷ ಹೆಚ್.ಎಂ.ಚಂದ್ರಶೇಖರಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇನ್ನಷ್ಟು ದಿನ ಲಾಕ್ಡೌನ್ ಬಿಗಿಯಾಗಿ ಮುಂದುವರಿಯಲಿ. ಲಾಕ್ಡೌನ್ ಸಡಿಲಿಕೆ ಮಾಡಿದ್ರೆ, ಅಪಾಯ ಎದುರಾಗುವ ಸಾಧ್ಯತೆಯಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಅಪಾಯಕ್ಕೆ ನಾವೇ ಆಹ್ವಾನ ನೀಡಬಾರದು. ಕೊರೊನಾ ನಿಯಂತ್ರಣದಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರ ಕಾರ್ಯ ಮೆಚ್ಚತಕ್ಕದ್ದು,ಹಾಗಾಗಿ ಜಿಲ್ಲಾಡಳಿತ ಎಚ್ಚರದಿಂದ ಲಾಕ್ಡೌನ್ ಇನ್ನಷ್ಟು ಬಿಗಿಗೊಳಿಸುವ ಅವಶ್ಯಕತೆಯಿದೆ ಎಂದರು.
ಇನ್ನು, ಬೆಂಗಳೂರಿನಲ್ಲಿರುವ ಕೈಗಾರಿಕೆಗಳನ್ನು ರಾಜ್ಯದ ಬೇರೆಡೆಗೆ ಸ್ಥಳಾಂತರಿಸಬೇಕು ಹಾಗೂ ಬೆಂಗಳೂರಿಂದ ಕಾರ್ಮಿಕರನ್ನ ಉಚಿತವಾಗಿ ಅವರವರ ಊರುಗಳಿಗೆ ಕಳುಹಿಸುತ್ತಿರುವಂತೆ ಜಿಲ್ಲೆಯಲ್ಲಿರುವ ಕಾರ್ಮಿಕರನ್ನ ಸಹ ಅವರ ಸ್ವಗ್ರಾಮಕ್ಕೆ ಕಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.