ಶಿವಮೊಗ್ಗ:ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಹು ದಿನಗಳಿಂದ ನಿರೀಕ್ಷೆಯಲ್ಲಿದ್ದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಪುನರ್ ವಿಂಗಡಣೆ ಪಟ್ಟಿ ಪೂರ್ಣಗೊಳಿಸಿ, ರಾಜ್ಯ ಚುನಾವಣಾ ಆಯೋಗ ಅದಕ್ಕೆ ಅಧಿಕೃತ ಮುದ್ರೆ ಒತ್ತಿದೆ.
ಒಟ್ಟಾರೆ, ಜಿಲ್ಲಾ ಪಂಚಾಯತ್ ಕ್ಷೇತ್ರಗಳು 31 ರಿಂದ 35ಕ್ಕೆ ಏರಿಕೆಯಾಗಿದ್ದು, ತಾಲೂಕು ಪಂಚಾಯತ್ ಕ್ಷೇತ್ರಗಳು 116 ರಿಂದ 90ಕ್ಕೆ ಕುಸಿದಿವೆ. ಜನಸಂಖ್ಯೆ ಆಧಾರದ ಮೇಲೆ ಪುನರ್ ವಿಂಗಡಣೆ ನಡೆದಿದ್ದು, ಈ ಬಾರಿ ಪ್ರತಿ ಗ್ರಾಮ ಪಂಚಾಯತ್ಗಳನ್ನು ಪೂರ್ಣ ಪ್ರಮಾಣದಲ್ಲಿ ಜಿ.ಪಂ ಹಾಗೂ ತಾ.ಪಂ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ. ಈ ಮೊದಲು ಕೆಲವು ಗ್ರಾಮಗಳು ಹಾಗೂ ತಾ.ಪಂ ಕ್ಷೇತ್ರಗಳು ಅರೆಬರೆ ಹಂಚಿಕೆಯಾಗಿದ್ದವು. ಇದರಿಂದ ಅಭಿವೃದ್ಧಿ ವಿಚಾರದಲ್ಲಿ ಗೊಂದಲಗಳು ಇದ್ದವು. ಈ ಬಾರಿ ಅದಕ್ಕೆ ಆಸ್ಪದ ನೀಡಿಲ್ಲ.
ಪುನರ್‌ವಿಂಗಡೆಗೊಂಡ 35 ಜಿ.ಪಂ ಕ್ಷೇತ್ರಗಳು ಪಟ್ಟಿ ಇಂತಿದೆ
ಶಿವಮೊಗ್ಗ ತಾಲೂಕು
ಹಾರನಹಳ್ಳಿ ಕ್ಷೇತ್ರ:ಹಾರನಹಳ್ಳಿ ಗ್ರಾಮ ಪಂಚಾಯತ್, ರಾಮನಗರ, ಬಾಳೇಕೊಪ್ಪ, ಆಯನೂರು, ಕೋಹಳ್ಳಿ, ಕೊನಗವಳ್ಳಿ ಗ್ರಾಮ ಪಂಚಾಯತ್ಗಳನ್ನು ಒಳಗೊಂಡಿದೆ.
ಹರಮಘಟ್ಟ ಕ್ಷೇತ್ರ: ಹರಮಘಟ್ಟ, ಕುಂಚೇನಹಳ್ಳಿ, ಕೊಮ್ಮನಾಳ್, ಅಬ್ಬಲಗೆರೆ, ಕೋಟೆಗಂಗೂರು, ಮುದ್ದಿನಕೊಪ್ಪ ಹಾಗೂ ಮಲ್ಲಾಪುರ ಗ್ರಾಮ ಪಂಚಾಯತ್.
ಹೊಳಲೂರು ಕ್ಷೇತ್ರ: ಹೊಳಲೂರು, ಹಾಡೋನಹಳ್ಳಿ, ಸೂಗೂರು, ಬೇಡರಹೊಸಹಳ್ಳಿ, ಪಿಳ್ಳಂಗೆರೆ, ಕೂಡ್ಲಿ, ಮೇಲಿನಹನಸವಾಡಿ ಹಾಗೂ ಹೊಳೆಬೆನವಳ್ಳಿ ಗ್ರಾಮ ಪಂಚಾಯತ್.
ಹಸೂಡಿ ಕ್ಷೇತ್ರ: ಹಸೂಡಿ, ಶೆಟ್ಟಿಹಳ್ಳಿ, ಬೀರನಹಳ್ಳಿ, ನಿದಿಗೆ, ಸಂತೆಕಡೂರು, ಸೋಗಾನೆ ಹಾಗೂ ಬಿದರೆ ಗ್ರಾಮ ಪಂಚಾಯತ್.
ಗಾಜನೂರು ಕ್ಷೇತ್ರ:ಗಾಜನೂರು, ಹೊಸಹಳ್ಳಿ, ಮತ್ತೂರು, ಕಡೇಕಲ್, ಉಂಬ್ಳೆಬೈಲು ಮತ್ತು ಕೊರಲಹಳ್ಳಿ ಗ್ರಾಮ ಪಂಚಾಯತ್.
ಕುಂಸಿ ಜಿ.ಪಂ ಕ್ಷೇತ್ರ:ಕುಂಸಿ, ಸಿರಿಗೆರೆ, ತಮ್ಮಡಿಹಳ್ಳಿ, ಮಂಡಘಟ್ಟ, ತುಪ್ಪೂರು, ಚೋರಡಿ, ಪುರದಾಳು ಹಾಗೂ ಅಗಸವಳ್ಳಿ ಗ್ರಾಮ ಪಂಚಾಯತ್
ಭದ್ರಾವತಿ ತಾಲೂಕು
ಅಗರದಹಳ್ಳಿ (ಆನವೇರಿ) ಕ್ಷೇತ್ರ: ಅಗರದಹಳ್ಳಿ, ಆನವೇರಿ, ಗುಡುಮಘಟ್ಟ, ಮೈದೊಳಲು, ಮಂಗೋಟೆ, ನಿಂಬೆಗೊಂದಿ, ಸನ್ಯಾಸಿಕೋಡವಗ್ಗೆ, ಸಿದ್ಲಿಪುರ, ಸೈದರಕಲ್ಲಹಳ್ಳಿ ಗ್ರಾಮ ಪಂಚಾಯತ್ಗಳು.
ಅರಬಿಳಚಿ ಕ್ಷೇತ್ರ:ಅರಬಿಳಚಿ, ಯಡೇಹಳ್ಳಿ, ಹನುಮಂತಾಪುರ, ಅರಹತೊಳಲು, ದಾಸರಕಲ್ಲಹಳ್ಳಿ, ಕಲ್ಲಿಹಾಳ್, ಮಾರಶೆಟ್ಟಿಹಳ್ಳಿ, ಅರಕರೆ
ತಡಸ(ಕೂಡ್ಲಿಗೆರೆ) ಕ್ಷೇತ್ರ: ತಡಸ, ಅರಳಿಹಳ್ಳಿ, ಅತ್ತಿಗುಂದ, ಕಾಗೆಕೋಡಮಗ್ಗೆ, ಕೋಮಾರನಹಳ್ಳಿ, ಕೂಡ್ಲಿಗೆರೆ, ನಾಗತಿಬೆಳಗಲು, ವೀರಾಪುರ
ಯರೇಹಳ್ಳಿ(ಹಿರಿಯೂರು) ಕ್ಷೇತ್ರ:ಯರೇಹಳ್ಳಿ, ಅಂತರಗಂಗೆ, ಅರಳೀಕೊಪ್ಪ, ಬಾರಂದೂರು, ಹಿರಿಯೂರು, ಕಾರೇಹಳ್ಳಿ, ಮಾವಿನಕೆರೆ, ದೊಡ್ಡೇರಿ
ದೊಣಬಘಟ್ಟ ಕ್ಷೇತ್ರ:ದೊಣಬಘಟ್ಟ, ಬಿಳಕಿ, ಕಲ್ಲಹಳ್ಳಿ, ಕಂಬದಾಳ್ ಹೊಸೂರು, ಸಿಂಗನಮನೆ, ತಾವರಘಟ್ಟ
ತೀರ್ಥಹಳ್ಳಿ ತಾಲೂಕು:
ಕೋಣಂದೂರು (ಆರಗ) ಕ್ಷೇತ್ರ: ಕೋಣಂದೂರು, ಆರಗ, ಅರಳಸುರಳಿ, ನೊಣಬೂರು, ಗುಡ್ಡೇಕೊಪ್ಪ, ದೇಮ್ಲಾಪುರ, ಹಾದಿಗಲ್ಲು, ಹುಂಚದಕಟ್ಟೆ, ಸಾಲೂರು
ಮೇಲಿನಕುರುವಳ್ಳಿ (ಕುಪ್ಪಳ್ಳಿ) ಕ್ಷೇತ್ರ: ಮೇಲಿನಕುರುವಳ್ಳಿ, ಮೇಳಿಗೆ, ಸಾಲ್ಗಡಿ, ಶೇಡ್ಗಾರು, ಹಾರೋಗಳಿಗೆ, ದೇವಂಗಿ, ಬಸವಾನಿ, ತೀರ್ಥಮುತ್ತೂರು, ಹೆಗ್ಗೋಡು(ಹೆರಬೈಲು), ಹೆದ್ದೂರು
ಲಿಂಗಾಪುರ ಕ್ಷೇತ್ರ:ಲಿಂಗಾಪುರ, ಲಿಂಗಾಪುರ, ಹಣಗೆರೆ, ಕನ್ನಂಗಿ, ಕುಡುಮಲ್ಲಿಗೆ, ಬಾಂಡ್ಯ, ಬೆಜ್ಜವಳ್ಳಿ, ಶಿಂಗನಬಿದರೆ, ತೂದೂರು, ತ್ರಿಯಂಬಕಪುರ
ಸುರಳಿ ಬಾಳೆಬೈಲು (ಮೇಗರವಳ್ಳಿ) ಕ್ಷೇತ್ರ:ಮುಳುಬಾಗಿಲು, ಹೊಸಹಳ್ಳಿ, ಮೇಗರವಳ್ಳಿ, ಕೊಳಿಗೆ, ಹೊನ್ನೆತಾಳು, ತಲ್ಲೂರು, ಬಿದರಗೋಡು, ನೆರಟೂರು, ಅರಳಾಪುರ, ಅರೇಹಳ್ಳಿ
ಸಾಗರ ತಾಲೂಕು:
ಕೆಳದಿ ಕ್ಷೇತ್ರ: ಕೆಳದಿ, ಭೀಮನೇರಿ, ಮಾಸೂರು, ಹಿರೇಬಿಲಗುಂಜಿ, ನಾಡಕಲ, ಬರೂರು, ಪಡವಗೋಡು, ಮಾಲ್ವೆ
ತ್ಯಾಗರ್ತಿ ಕ್ಷೇತ್ರ:ತ್ಯಾಗರ್ತಿ, ಗೌತಮಪುರ, ಆನಂದಪುರ, ಹೊಸೂರು, ಯಡೇಹಳ್ಳಿ, ಆಚಾಪುರ
ಆವಿನಹಳ್ಳಿ ಕ್ಷೇತ್ರ: ಆವಿನಹಳ್ಳಿ, ಯಡಜಿಗಳೇಮನೆ, ಕಲ್ಮನೆ, ಹೆಗ್ಗೋಡು, ಭೀಮನಕೋಣೆ, ಕೋಳೂರು, ಉಳ್ಳೂರು
ಕುದರೂರು ಕ್ಷೇತ್ರ: ಕುದರೂರು, ತುಮರಿ, ಸಂಕಣ್ಣ ಶಾನುಬೋಗ್, ಚನ್ನಗೊಂಡ, ಭಾನುಕುಳಿ, ಅರಳಗೋಡು, ತಲವಟ
ಕಾನ್ಲೆ ಕ್ಷೇತ್ರ:ಕಾನ್ಲೆ, ತಾಳಗುಪ್ಪ, ಸೈದೂರು, ಹಿರೇನಲ್ಲೂರು, ಖಂಡಿಕಾ, ಶಿರುವಂತೆ
ಶಿಕಾರಿಪುರ ತಾಲೂಕು
ಈಸೂರು ಕ್ಷೇತ್ರ:ಈಸೂರು, ಹಾರೋಗೊಪ್ಪ, ಗಾಮ, ಹಿತ್ತಲ, ಅರಿಶಿಣಗೆರೆ, ಚುರ್ಚಿಗುಂಡಿ, ಕಲ್ಮನೆ, ತರಲಘಟ್ಟ
ಬೇಗೂರು ಕ್ಷೇತ್ರ:ಬೇಗೂರು, ಮಾರವಳ್ಳಿ, ಕಾಗಿನಲ್ಲಿ, ಜಕ್ಕಿನಕೊಪ್ಪ, ಗೊಗ್ಲ, ಹೊಸೂರು, ಮುದ್ದನಹಳ್ಳಿ
ಬೆಳಗಾವಿ ಕ್ಷೇತ್ರ : ಬೆಳಗಾವಿ, ಇನಾಂಅಗ್ರಹಾರ ಮುಚುಡಿ, ಚಿಳಿಕಿ, ತೊಗರ್ಸಿ, ತಾಳಗುಂದ, ಚಿಕ್ಕಮಾಗಡಿ, ಹರಗಿ, ನರಸಾಪುರ
ಸಾಲೂರು ಕ್ಷೇತ್ರ: ಸಾಲೂರು, ಕಪ್ಪನಹಳ್ಳಿ, ಜಕ್ಕನಹಳ್ಳಿ (ಕಾಣಿವೆಮನೆ), ಉಡುಗಣಿ, ಮುಡುಬ ಸಿದ್ದಾಪುರ, ಅಮಟೆಕೊಪ್ಪ, ಹೋತನಕಟ್ಟೆ
ಚಿಕ್ಕಜಂಬೂರು ಕ್ಷೇತ್ರ: ಚಿಕ್ಕಜಂಬೂರು, ಸುಣ್ಣದಕೊಪ್ಪ, ಮಂಚಿಕೊಪ್ಪ, ಕೊರಟಿಗೆರೆ, ಮಳವಳ್ಳಿ (ಮಳವಳ್ಳಿ ತಾಂಡ), ಹಿರೇಜಂಬೂರು
ಅಂಬಾರಗೊಪ್ಪ ಕ್ಷೇತ್ರ: ಅಂಬಾರಗೊಪ್ಪ, ಮತ್ತಿಕೋಟೆ, ಗುಡ್ಡದ ತುಮ್ಮಿನಕಟ್ಟೆ, ಕಿಟ್ಟದಹಳ್ಳಿ, ಬಗನಕಟ್ಟೆ, ನೆಲವಾಗಿಲು, ಗೊದ್ದನಕೊಪ್ಪ
ಸೊರಬ ತಾಲೂಕು
ಮೂಡಿ ಕ್ಷೇತ್ರ: ಮೂಡಿದೊಡ್ಡಿಕೊಪ್ಪ, ಅಗಸನವಳ್ಳಿ, ಹುರುಳಿ, ಎಣ್ಣೆಕೊಪ್ಪ, ಹಂಚಿ, ಭಾರಂಗಿ
ಜಡೆ ಕ್ಷೇತ್ರ: ಜಡೆ, ಶಕುನವಳ್ಳಿ, ತಲಗಡ್ಡೆ, ತೆಲಗುಂದ, ಕಾತುವಳ್ಳಿ, ದ್ಯಾವನಹಳ್ಳಿ
ಉದ್ರಿ (ತತ್ತೂರು): ಉದ್ರಿ ತತ್ತೂರು, ಅಂಡಿಗೆ, ಕುಪ್ಪಗಡ್ಡೆ, ತವನಂದಿ, ಗೆಂಡ್ಲ
ಚಂದ್ರಗುತ್ತಿ ಕ್ಷೇತ್ರ: ಚಂದ್ರಗುತ್ತಿ, ಬೆನ್ನೂರು, ಗುಡವಿ, ನ್ಯಾರ್ಶಿ, ಹೆಚ್ಚೆ, ಮುಟುಗುಪ್ಪೆ, ಹೊಸಬಾಳೆ ಗ್ರಾಮ
ಶಿಗ್ಗಾ ಕ್ಷೇತ್ರ:ಶಿಗ್ಗಾ, ಬಿಳುವಾಣಿ, ಮಾವಲಿ, ಹೆಗ್ಗೋಡು, ಚಿಟ್ಟೂರು, ಇಂಡುವಳ್ಳಿ, ನಿಸರಾಣಿ, ಉಳವಿ, ದೂಗೂರು
ಹೊಸನಗರ ತಾಲೂಕು:
ಕಳೂರು (ಹೊಸನಗರ) ಕ್ಷೇತ್ರ:ಪುರಪ್ಪೆಮನೆ, ಹರಿದ್ರಾವತಿ, ಮಾರುತಿಪುರ, ಜೇನಿ, ಎಂ.ಗುಡ್ಡೇಕೊಪ್ಪ, ಮೇಲಿನಬೇಸಿಗೆ, ಮುಂಬಾರು
ಹುಂಚ ಕ್ಷೇತ್ರ: ಹುಂಚ, ಚಿಕ್ಕಜೇನಿ, ಹೆದ್ದಾರಿಪುರ, ಕೋಡೂರು, ಅಮೃತ, ಸೋನಲೆ, ತ್ರಿಣವೆ
ರಿಪ್ಪನ್‌ಪೇಟೆ ಕ್ಷೇತ್ರ: ರಿಪ್ಪನ್‌ಪೇಟೆ, ಕೆಂಚನಾಳ, ಅರಸಾಳು, ಬೆಳ್ಳೂರು, ಹರತಾಳು, ಬಾಳೂರು
ಮೂಡುಗೊಪ್ಪ(ನಗರ) ಕ್ಷೇತ್ರ: ಮೂಡುಗೊಪ್ಪ (ನಗರ), ನಾಗೋಡಿ, ಹೊಸೂರು ಸಂಪೇಕಟ್ಟೆ, ಅರಮನೆಕೊಪ್ಪ (ಮತ್ತಿಮನೆ), ಕರಿಮನೆ (ನಿಲ್ಸಕಲ್), ರಾಮಚಂದ್ರಪುರ, ಅಂಡಗದೂದೂರು, ಕೈರಗುಂದ (ಮಾಸ್ತಿಕಟ್ಟೆ), ಸುಳಗೋಡು, ಯಡೂರು
ಓದಿ:ಮುಷ್ಕರ 'ಕೈಗಾರಿಕಾ ವಿವಾದ ಕಾಯ್ದೆ'ಯ ವಿರುದ್ಧವಾಗಿದೆ: ಸಾರಿಗೆ ನೌಕರರ ಪ್ರತಿಭಟನೆ ನಿಷೇಧಿಸಿ ಸರ್ಕಾರದ ಆದೇಶ