ಕರ್ನಾಟಕ

karnataka

ETV Bharat / city

ಶಿವಮೊಗ್ಗ: ಸಿಂಹದ ಜೊತೆ ಕಾದಾಟ ನಡೆಸಿ ಗಾಯಗೊಂಡಿದ್ದ ಸಿಂಹಿಣಿ ಸಾವು! - ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಸಿಂಹದ ಜೊತೆ ಕಾದಾಟ ನಡೆಸಿ ಗಾಯಗೊಂಡಿದ್ದ ಸಿಂಹಿಣಿ ಮಾನ್ಯ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ.

Lioness manya died yesterday
ಸಿಂಹಿಣಿ ಮಾನ್ಯ ಸಾವು

By

Published : Feb 1, 2022, 2:08 PM IST

ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಸಿಂಹಿಣಿ ಮಾನ್ಯ (11) ಸಾವನ್ನಪ್ಪಿದೆ. ಸಿಂಹಿಣಿ ಮಾನ್ಯ ಒಂದು ವಾರದ ಹಿಂದೆ ಯಶವಂತ್ ಎಂಬ ಸಿಂಹದ ಜೊತೆ ಕಾದಾಟ ನಡೆಸಿ, ಗಂಭೀರವಾಗಿ ಗಾಯಗೊಂಡಿತ್ತು. ಕಳೆದ ಒಂದು ವಾರದಿಂದ ಗಾಯಗೊಂಡ ಸಿಂಹಿಣಿ ಮಾನ್ಯಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ಸಿಂಹಿಣಿ ಮೃತಪಟ್ಟಿದೆ.

ಇದನ್ನೂ ಓದಿ:ರಾಮನಗರದ ಅಗರ ಬತ್ತಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ : ಕಾರ್ಖಾನೆ ಸಂಪೂರ್ಣ ಭಸ್ಮ!

ತ್ಯಾವರೆಕೊಪ್ಪ ಸಿಂಹಧಾಮದ ಸಿಬ್ಬಂದಿ ಇಂದು ಮೃತ ಸಿಂಹಿಣಿ ಅಂತ್ಯ ಸಂಸ್ಕಾರ ನಡೆಸಲಿದ್ದಾರೆ. ಇನ್ನೂ ಸಿಂಹಧಾಮದಲ್ಲಿ ಆರು ಸಿಂಹಗಳಿದ್ದವು. ಮಾನ್ಯ ಮೃತಪಟ್ಟ ಹಿನ್ನೆಲೆ ಸಿಂಹಗಳ ಸಂಖ್ಯೆ ಐದಕ್ಕಿಳಿದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details