ಕರ್ನಾಟಕ

karnataka

ETV Bharat / city

ಅಂಗಡಿ ಮುಂದೆ ಬೈಕ್ ಪಾರ್ಕಿಂಗ್​ ಕಿರಿಕ್​,ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ - ಪಾರ್ಕಿಂಗ್​ ವಿಚಾರಕ್ಕೆ ಕೊಲೆ ಸುದ್ದಿ

ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಪಾರ್ಕಿಂಗ್ ವಿಚಾರಕ್ಕೆ ಕೊಲೆ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿದೆ.

life imprisonment for murder offender in shimogga
ಅಂಗಡಿ ಮುಂದೆ ಬೈಕ್ ಪಾರ್ಕಿಂಗ್​ ಕಿರಿಕ್​,ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

By

Published : Dec 31, 2021, 4:48 AM IST

ಶಿವಮೊಗ್ಗ:ತನ್ನ ಅಂಗಡಿ ಮುಂದೆ ಬೈಕ್ ಪಾರ್ಕಿಂಗ್ ಮಾಡಿದ ಎಂಬ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಅಪರಾಧಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿದೆ.

2019ರಂದು ಶಿರಾಳಕೊಪ್ಪದಲ್ಲಿ ಕಬ್ಬಿನ ಜ್ಯೂಸ್ ಅಂಗಡಿ ನಡೆಸುತ್ತಿದ್ದ ಸೈಯದ್ ಜಾಫರ್ ಮುಲ್ಲಾ (26) ಎಂಬಾತನನ್ನು ಅದೇ ಜಾಗದಲ್ಲಿ ಕುಷನ್ ಅಂಗಡಿ ನಡೆಸುತ್ತಿದ್ದ ಜಾವೀದ್ ಬೇಗ್ ಚಾಕುವಿನಿಂದ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದನು.

ಸೈಯದ್ ಜಾಫರ್ ಮುಲ್ಲಾನ ಜ್ಯೂಸ್ ಅಂಗಡಿಗೆ ಬರುತ್ತಿದ್ದ ಗಿರಾಕಿಗಳು ಜಾವಿದ್ ಬೇಗ್​ನ ಕುಷನ್ ಅಂಗಡಿಯ ಮುಂದೆ ಬೈಕ್ ನಿಲ್ಲಿಸುತ್ತಿದ್ದರು. ಈ ಬಗ್ಗೆ ಜಾವೀದ್ ಬೇಗ್ ಅನೇಕ ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರೂ, ಗಿರಾಕಿಗಳು ಜಾವೀದ್ ಬೇಗ್​ನ ಅಂಗಡಿಯ ಮುಂದೆ ನಿಲ್ಲಿಸುತ್ತಿದ್ದರು.

2019ರ ನವೆಂಬರ್ 6ರಂದು ಇದೇ ವಿಚಾರದಲ್ಲಿ ಜಗಳ ನಡೆದಿದೆ. ಕೋಪಗೊಂಡ ಜಾವೀದ್​ ಬೇಗ್​ಗೆ ಜಾಫರ್​ ಮುಲ್ಲಾನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಕುರಿತು ಮೃತನ ಸಹೋದರ ನೀಡಿದ ದೂರಿನ ಅನ್ವಯ ತನಿಖೆ ನಡೆಸಿ, ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಈ ಕುರಿತು ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ಮುಸ್ತಫಾ ಹುಸೇಸ್​ರವರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ವಕೀಲ ಸುರೇಶ್ ಕುಮಾರ್ ವಾದ ಮಂಡಿಸಿದ್ದರು.

ಇದನ್ನೂ ಓದಿ:ಆಟೋ ಕೊಡಿಸಿ ಅಥವಾ ಆಸ್ತಿ ಭಾಗ ಮಾಡಿ ಎಂದ ತಮ್ಮನ ಕೊಂದ ಅಣ್ಣ

ABOUT THE AUTHOR

...view details