ಶಿವಮೊಗ್ಗ: ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಹಾಗೂ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಸಹೋದರ ಬಿ.ಕೆ. ಶಿವಕುಮಾರ್ ಅವರ ಪುತ್ರಿಯ ನಿಶ್ಚಿತಾರ್ಥ ಕಾರ್ಯ ಅದ್ಧೂರಿಯಾಗಿ ನಡೆಯಿತು.
ಕೈ ಬಳಗದಲ್ಲೇ ಮಗನಿಗೆ ಕನ್ಯೆ ಹುಡುಕಿದ ಲಕ್ಷ್ಮೀ ಹೆಬ್ಬಾಳ್ಕರ್: ಮೃಣಾಲ್-ಹಿತಾ ಅದ್ಧೂರಿ ನಿಶ್ಚಿತಾರ್ಥ
ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಸಹೋದರ ಬಿ.ಕೆ. ಶಿವಕುಮಾರ್ ಅವರ ಪುತ್ರಿಯ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿತು.
ಲಕ್ಷ್ಮೀ ಹೆಬ್ಬಾಳ್ಕರ್ ಮಗ ಮಿರ್ನಾಲ್ ಹೆಬ್ಬಾಳ್ಕರ್ ನಿಶ್ಚಿತಾರ್ಥ ಕಾರ್ಯ
ಇಂದು ನಗರದ ಸರ್ಜಿ ಕನ್ವೆನ್ಷನಲ್ ಹಾಲ್ನಲ್ಲಿ ಲಕ್ಷ್ಮೀ ಹೆಬ್ಬಾಳ್ ಕರ್ ಪುತ್ರ ಮೃಣಾಲ್ ಹಾಗೂ ಬಿ.ಕೆ. ಶಿವಕುಮಾರ್ ಪುತ್ರಿ ಬಿ.ಎಸ್. ಹಿತಾ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ಜರುಗಿತು.
ಉಭಯ ಕುಟುಂಬದವರು ಸೇರಿ ನಡೆಸಿದ ಈ ಕಾರ್ಯಕ್ರಮದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಎಂಎಲ್ಸಿ ರಘು ಆಚಾರ್, ಆಯನೂರು ಮಂಜುನಾಥ್ ಸೇರಿದಂತೆ ವಿವಿಧ ಗಣ್ಯರು ಆಗಮಿಸಿದ್ದರು. ಶೀಘ್ರವೇ ಮದುವೆಯೂ ನಡೆಯಲಿದೆ ಎಂದು ಎರಡೂ ಕುಟುಂಬದ ಮೂಲಗಳು ತಿಳಿಸಿವೆ.
Last Updated : Aug 17, 2020, 10:35 PM IST