ಶಿವಮೊಗ್ಗ :ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ ಎಸ್ ಈಶ್ವರಪ್ಪನವರ ಸಮ್ಮುಖದಲ್ಲಿ ಗ್ರಾಮದ ಮಹಿಳೆಯೊಬ್ಬರು ಪಿಡಿಒರನ್ನು ತರಾಟೆಗೆ ತೆಗೆದುಕೊಂಡ ಘಟನೆ ಹಸೂಡಿ ಗ್ರಾಮದಲ್ಲಿ ನಡೆದಿದೆ. ಪಿಡಿಒ ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹಾಗೂ ಸ್ಯಾನಿಟೈಸರ್ ಮಾಡಿರುವ ಮಾಹಿತಿ ನೀಡುತ್ತಿದ್ದಂತಯೇ, ಸಭೆಗೆ ಬಂದಿದ್ದ ಮಹಿಳೆ ಎದ್ದು ನಿಂತು ಸಚಿವರಿಗೆ ತಪ್ಪು ಮಾಹಿತಿ ನೀಡಬೇಡಿ, ಸುಳ್ಳು ಹೇಳಬೇಡಿ ಎಂದು ಏರು ಧ್ವನಿಯಲ್ಲಿ ಮಾತನಾಡಿದರು.
ಹಸೂಡಿ ಗ್ರಾಮ ಪಂಚಾಯತ್ನಲ್ಲಿ ಇಂದು ಸಚಿವ ಈಶ್ವರಪ್ಪ ಟಾಸ್ಕ್ ಪೂರ್ಸ್ ಸಮಿತಿ ಸಭೆ ನಡೆಸಿದರು. ಈ ವೇಳೆ ಪಿಡಿಒ ಅವರು ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು, ಸ್ಯಾನಿಟೈಸರ್ ಮಾಡಿರುವ ಬಗ್ಗೆ ಮಾಹಿತಿ ನೀಡುತ್ತಿದ್ದಂತಯೇ, ಸಭೆಗೆ ಬಂದಿದ್ದ ಮಹಿಳೆ ಎದ್ದು ನಿಂತು ಸಚಿವರಿಗೆ ತಪ್ಪು ಮಾಹಿತಿ ನೀಡಬೇಡಿ, ಪಾಸಿಟಿವ್ ಬಂದ ಮನೆಗೆ ಎಲ್ಲಿ ಸ್ಯಾನಿಟೈಸರ್ ಮಾಡಿದ್ದೀರಿ, ಫೋನ್ ಮಾಡಿ ಹೇಳಿದ್ರೂ ಸಹ ಮಾಡಿಲ್ಲ. ಸುಳ್ಳು ಹೇಳಬೇಡಿ ಎಂದು ಏರು ಧ್ವನಿಯಲ್ಲಿ ಮಾತನಾಡಿದರು. ಇದಕ್ಕೆ ಸಚಿವರು ಆಯ್ತು ಕುಳಿತುಕೊಳ್ಳಮ್ಮ ಎಂದು ಸಲಹೆ ನೀಡಿದರು.