ಕರ್ನಾಟಕ

karnataka

ETV Bharat / city

ಕಾಲಿಗೆ ಗುಂಡು ಹೊಡೆದಿರುವುದು ಒಂದು ಸ್ಯಾಂಪಲ್ ಅಷ್ಟೇ: ಕೆ.ಎಸ್.ಈಶ್ವರಪ್ಪ - ಶಿವಮೊಗ್ಗ ಚಾಕು ಇರಿತ ಪ್ರಕರಣ

ಶಿವಮೊಗ್ಗದಲ್ಲಿ ಚಾಕು ಇರಿತಕ್ಕೊಳಗಾದ ಯುವಕನನ್ನು ಭೇಟಿ ಮಾಡಿದ ಮಾಜಿ ಸಚಿವ ಈಶ್ವರಪ್ಪ ಆರೋಗ್ಯ ವಿಚಾರಿಸಿದರು.

kn_smg_02_santoshkse_visit_script_7204213
ಕೆ.ಎಸ್.ಈಶ್ವರಪ್ಪ

By

Published : Aug 17, 2022, 4:28 PM IST

Updated : Aug 17, 2022, 6:08 PM IST

ಶಿವಮೊಗ್ಗ: ಚಾಕು ಇರಿತ ಪ್ರಕರಣದಲ್ಲಿ ಈಗ ಓರ್ವನ ಕಾಲಿಗೆ ಗುಂಡೇಟು ಹೊಡೆಯಲಾಗಿದೆ. ಇದು ಒಂದು ಸ್ಯಾಂಪಲ್ ಅಷ್ಟೇ. ಮುಂದೆ ಇದೇ ರೀತಿ ನಡೆದುಕೊಂಡರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು.

ಪ್ರೇಮ್ ಸಿಂಗ್​ರ ಆರೋಗ್ಯ ವಿಚಾರಿಸಲು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜೊತೆ ಆಗಮಿಸಿದ ಅವರು, ನಾವು ಹಾಗೂ ನಮ್ಮ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ಸಂಸದ ರಾಘವೇಂದ್ರ ಅವರು ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಿದ್ದೇವೆ. ಆತನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದರು.

ಕೆ.ಎಸ್.ಈಶ್ವರಪ್ಪ

ನಗರದಲ್ಲಿ ಕೊಲೆ, ಚಾಕು ಇರಿತದಂತಹ ಪ್ರಕರಣಗಳು ಹೆಚ್ಚಾಗಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಘಟನೆಗಳನ್ನು ತಡೆಯಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ. ಆರೋಪಿಯ ಕಾಲಿಗೆ ಗುಂಡು ಹೊಡೆಯಲಾಗಿದೆ. ಸಮಾಜಘಾತುಕ ಶಕ್ತಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ.. ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

Last Updated : Aug 17, 2022, 6:08 PM IST

ABOUT THE AUTHOR

...view details