ಶಿವಮೊಗ್ಗ :ಅಧಿಕಾರದ ಸೊಕ್ಕಿನಿಂದಲೇ ಬಿಜೆಪಿ ಮುಖಂಡ ಸಿ ಟಿ ರವಿ ಅವರು ಇಂದಿರಾ ಗಾಂಧಿ ಹಾಗೂ ನೆಹರು ಅವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ ಟಿ ರವಿಯವರಿಗಿದು ಶೋಭೆ ತರುವುದಿಲ್ಲ. ರಾಜ್ಯದ ಮಂತ್ರಿಯಾಗಿ, ಈಗ ದೇಶದ ರಾಜಕಾರಣದಲ್ಲಿದ್ದಾರೆ. ಹಾಗಾಗಿ, ಜವಾಬ್ದಾರಿ ಜಾಸ್ತಿ ಇದೆ. ಯೋಚನೆ ಮಾಡಿ ಮಾತನಾಡಬೇಕು. ರಾಷ್ಟ್ರದ ಆಡಳಿತ ನಡೆಸಿದಂತವರ ಬಗ್ಗೆ ಹಾಗೂ ದೇಶಕ್ಕೆ ಕೊಡುಗೆ ನೀಡಿದವರ ಮನೆತನದ ಬಗ್ಗೆ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ನಾನು ಸಿ ಟಿ ರವಿಯವರಿಗೆ ಬೈಯ್ಯುವುದಿಲ್ಲ. ಇಂದಿರಾ ಗಾಂಧಿ ಅವರ ಹೆಸರನ್ನು ಕ್ಯಾಂಟೀನ್ಗೆ ಇಟ್ಟಿರುವುದು ಸಾರ್ಥಕತೆ ಇದೆ. ವಾಜಪೇಯಿ ಅವರು ಇಂದಿರಾ ಗಾಂಧಿ ಅವರನ್ನು ದೇಶದ ದುರ್ಗೆ ಎಂದಿದ್ದರು. ದುರ್ಗೆ ಎಂದರೆ ದೇವರು ಅಲ್ಲವೇ?. ಬಿಜೆಪಿಯವರು ತತ್ವ, ಸಿದ್ಧಾಂತ ನಾವು ದೇವರು ಅಂತಾರೆ. ಹಾಗಾಗಿ, ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮಾತನಾಡಬೇಕು ಎಂದು ಸಲಹೆ ನೀಡಿದರು.
ಸಚಿವ ಈಶ್ವರಪ್ಪ ಅವರು ಸ್ವಾತಂತ್ರ್ಯ ಹೋರಾಟ ಮಾಡಿಲ್ಲ. ಹಾಗಾಗಿ, ಕಾಂಗ್ರೆಸ್ನವರು ಸ್ವಾತಂತ್ರ್ಯ ಹೋರಾಟ ಮಾಡಿಲ್ಲ ಎನ್ನುತ್ತಾರೆ. ದೇಶ ಪ್ರೇಮಿಗಳಾಗಿ ಇರಲು ಬಿಜೆಯವರು ಲಾಯಕಿಲ್ಲ. ಅವರು ದುಡ್ಡು ಮಾಡಲು ಮಾತ್ರ ಇರುವವರು ಎಂದು ಗೋಪಾಲಕೃಷ್ಣ ಗುಡುಗಿದರು.