ಶಿವಮೊಗ್ಗ:ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ರಿಲೀಸ್ ಆಗದ ಹಿನ್ನೆಲೆಯಲ್ಲಿ ನಗರದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ ಹೆಚ್ಪಿಸಿ ಟಾಕೀಸ್ ಮುಂದೆ ಸಹಸ್ರಾರು ಸಂಖ್ಯೆಯಲ್ಲಿ ಕಿಚ್ಚನ ಅಭಿಮಾನಿಗಳು ಇಂದು ಜಮಾಯಿಸಿದ್ದರು. ತಾಂತ್ರಿಕ ದೋಷದಿಂದ ಬೆಳಗಿನ ಜಾವದ ಫ್ಯಾನ್ ಶೋ ರದ್ದು ಮಾಡಲಾಗಿದ್ದು, ಇದು ಅಭಿಮಾನಿಗಳ ಬೆಸರಕ್ಕೆ ಕಾರಣವಾಗಿದೆ.