ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಸಂಗಮೇಶ್ವರ ಜಾತ್ರೆಗೆ ನಿನ್ನೆ (ಶನಿವಾರ) ಚಾಲನೆ ದೊರೆತಿದೆ. ಕೂಡ್ಲಿ ಗ್ರಾಮದಲ್ಲಿ ತುಂಗ ಮತ್ತು ಭದ್ರಾ ನದಿಗಳ ಸಂಗಮವಾಗುತ್ತದೆ. ಇಲ್ಲಿ ವರ್ಷಂಪ್ರತಿ ಯುಗಾದಿಯ ದಿನದಿಂದ ಮೂರು ದಿನಗಳ ಕಾಲ ಜಾತ್ರೆ ನಡೆಯುತ್ತದೆ.
ಈ ಜಾತ್ರೆಯ 2ನೇ ದಿನ ಸಂಗಮೇಶ್ವರನ ರಥೋತ್ಸವ ನಡೆಯುತ್ತದೆ. ಈ ದಿನ ಕೂಡ್ಲಿ ಸುತ್ತಮುತ್ತಲಿನ ನೂರಾರು ಗ್ರಾಮದ ದೇವತೆಗಳು ಆಗಮಿಸಿ ತುಂಗ ಭದ್ರಾ ಸಂಗಮದಲ್ಲಿ ಪೂಜೆ ಸಲ್ಲಿಸಿ, ಸಂಗಮೇಶ್ವರನ ದರ್ಶನ ಪಡೆದು ವಾಪಸ್ ಆಗುತ್ತಾರೆ ಎನ್ನುವುದು ಜನರ ನಂಬಿಕೆ. ಸಂಗಮದಲ್ಲಿ ನಡೆಯುವ ಜಾತ್ರೆ ಜನರನ್ನು ಆಕರ್ಷಿಸುವುದು ಇಲ್ಲಿ ನಡೆಯುವ ನಡುಗಡ್ಡೆಯ ಜಾತ್ರೆಯಿಂದ. ಜಾತ್ರೆಗೆ ಬರುವವರು ತೆಪ್ಪದಲ್ಲಿ ಸಾಗುತ್ತಾರೆ.