ಕರ್ನಾಟಕ

karnataka

ETV Bharat / city

ಸಾಗರದಲ್ಲಿ ಮಾಜಿ ಯೋಧರಿಂದ ಕಾರ್ಗಿಲ್ ವಿಜಯ ದಿನಾಚರಣೆ - Sagara shimogga latest news

ಭಾರತೀಯ ಸೈನಿಕರ ಬಲಿದಾನ, ತ್ಯಾಗವನ್ನು‌ ಹಾಗೂ ತಾವು ಯುದ್ಧದಲ್ಲಿ ಭಾಗಿಯಾದ ಕ್ಷಣದ ಬಗ್ಗೆ ಮೆಲುಕು ಹಾಕಿದರು. ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ಸೈನಿಕರಿಗೆ ಎಲ್ಲರು ಗೌರವ‌ ನೀಡುವುದನ್ನು ಕಲಿಯಬೇಕು..

Kargil vijay divas celebration
Kargil vijay divas celebration

By

Published : Jul 26, 2020, 8:32 PM IST

ಶಿವಮೊಗ್ಗ :ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ವತಿಯಿಂದ ಸಾಗರದಲ್ಲಿ ಕಾರ್ಗಿಲ್ ವಿಜಯೋತ್ಸವ ದಿನವನ್ನು ಆಚರಿಸಲಾಯಿತು.

ಸಾಗರದ ತಮ್ಮ‌ ಕಚೇರಿಯಲ್ಲಿ ಸರಳ ಸಮಾರಂಭದ ಮೂಲಕ ಕಾರ್ಗಿಲ್ ವಿಜಯ್‌ ದಿವಸ್ ಆಚರಣೆ ಮಾಡಲಾಯಿತು. ಮಾಜಿ ಯೋಧರು ಭಾರತ ಮಾತೆಗೆ ಪುಷ್ಪ‌ನಮನ ಸಲ್ಲಿಸಿದರು.

ಈ ವೇಳೆ ಭಾರತೀಯ ಸೈನಿಕರ ಬಲಿದಾನ, ತ್ಯಾಗವನ್ನು‌ ಹಾಗೂ ತಾವು ಯುದ್ಧದಲ್ಲಿ ಭಾಗಿಯಾದ ಕ್ಷಣದ ಬಗ್ಗೆ ಮೆಲುಕು ಹಾಕಿದರು. ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ಸೈನಿಕರಿಗೆ ಎಲ್ಲರು ಗೌರವ‌ ನೀಡುವುದನ್ನು ಕಲಿಯಬೇಕು.

ಸರ್ಕಾರಗಳು ಸಹ ಮಾಜಿ ಸೈನಿಕರನ್ನು‌ ಸರಿಯಾಗಿ ನಡೆಸಿಕೊಳ್ಳಬೇಕು ಎಂದು ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಸುಭಾಷ್, ರಂಗರಾಜ್, ಅಣ್ಣಪ್ಪ, ರವಿ ಬಂದಗದ್ದೆ, ಸೋಮಣ್ಣ, ವೆಂಕಟೇಶ್, ಪರಮೇಶ್ವರಪ್ಪ, ವಸಂತ್ ಕುಗ್ವೆ, ಕಿಶೋರ್ ಭೈರಾಪುರ ಹಾಜರಿದ್ದರು.

ABOUT THE AUTHOR

...view details