ಶಿವಮೊಗ್ಗ: ಅಡಕೆ ಸಸಿ ಕಿತ್ತು ಹಾಕಿದ್ದಾರೆ ಎಂದು ಆರೋಪಿಸಿ ವನ ರಕ್ಷಕನ ಮನೆ ಮುಂದೆ ಗ್ರಾಮಸ್ಥರು ಅಹೋರಾತ್ರಿ ಪ್ರತಿಭಟನೆ ನಡೆಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ಕನ್ನಂಗಿ ಗ್ರಾಮದಲ್ಲಿ ನಡೆದಿದೆ.
ಲಂಚ ನೀಡದಿದ್ದಕ್ಕೆ ಅಡಿಕೆ ಸಸಿ ಕಿತ್ತ ಆರೋಪ: ವನ ರಕ್ಷಕನ ಮನೆ ಮುಂದೆ ಗ್ರಾಮಸ್ಥರ ಪ್ರತಿಭಟನೆ - ಶಿವಮೊಗ್ಗ ಕನ್ನಂಗಿ ಗ್ರಾಮಸ್ಥರ ಪ್ರತಿಭಟನೆ
ಅರಣ್ಯ ಭೂಮಿ ಎಂದು ಹಿಂದೆ ರೈತ ಪ್ರಭಾಕರ್ರಿಂದ ವನ ರಕ್ಷಕ ಸಹದೇವ್ ಎಂಬುವವರು 10 ಸಾವಿರ ರೂ. ಲಂಚ ಪಡೆದಿದ್ದರಂತೆ. ಮತ್ತೆ ಲಂಚದ ಬೇಡಿಕೆ ಇಟ್ಟಿದ್ದು, ಹಣ ನೀಡದ ಪ್ರಭಾಕರ್ ಅವರ ಸುಮಾರು 500ಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ಕಿತ್ತು ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಗ್ರಾಮಸ್ಥರ ಪ್ರತಿಭಟನೆ
ಕನ್ನಂಗಿ ಗ್ರಾಮದ ಪ್ರಭಾಕರ್ ಅರಣ್ಯ ಭೂಮಿಯಲ್ಲಿ ಅಡಕೆ ಸಸಿ ನೆಟ್ಟಿದ್ದರು. ಇದು ಅರಣ್ಯ ಭೂಮಿ ಎಂದು ಈ ಹಿಂದೆ ರೈತ ಪ್ರಭಾಕರ್ರಿಂದ ವನ ರಕ್ಷಕ ಸಹದೇವ್ ಎಂಬುವವರು 10 ಸಾವಿರ ರೂ. ಲಂಚ ಪಡೆದಿದ್ದರಂತೆ. ಮತ್ತೆ ಲಂಚದ ಬೇಡಿಕೆ ಇಟ್ಟಿದ್ದು, ಹಣ ನೀಡದ ಪ್ರಭಾಕರ್ ಅವರ ಸುಮಾರು 500ಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ಕಿತ್ತು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ವನ ರಕ್ಷಕ ಸಹದೇವ್ ಮನೆ ಮುಂದೆ ಕನ್ನಂಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಸತೀಶ್ ಭೇಟಿ ನೀಡಿ ಮನವೊಲಿಸುವ ಯತ್ನ ನಡೆಸಿದರೂ ವಿಫಲವಾಗಿದೆ.