ಶಿವಮೊಗ್ಗ :ಇಂದು ಸಂಜೆ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಗಾಯಗೊಂಡ ಸುನೀಲ್ ಆರೋಗ್ಯ ವಿಚಾರಿಸಿದರು. ನಂತರ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಆರೋಪಿ ಮುಬಾರಕ್ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಭದ್ರಾವತಿ ಆಸ್ಪತ್ರೆಗೆ ಭೇಟಿ ನೀಡಿ ಸುನೀಲ್ ಆರೋಗ್ಯ ವಿಚಾರಿಸಿದ ಕೆ ಎಸ್ ಈಶ್ವರಪ್ಪ - ಈಟಿವಿ ಭಾರತ್ ಕರ್ನಾಟಕ
ಭದ್ರಾವತಿಯ ಸುನೀಲ್ ಎಂಬಾತ ಕೆಲಸಕ್ಕೆಂದು ಹೋಗುತ್ತಿದ್ದಾಗ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ಮಾಡಿದ್ದರು.
ಭದ್ರಾವತಿ ಆಸ್ಪತ್ರೆಗೆ ಭೇಟಿ ನೀಡಿ ಸುನೀಲನ ಆರೋಗ್ಯ ವಿಚಾರಿಸಿದ ಕೆ ಎಸ್ ಈಶ್ವರಪ್ಪ
ಭದ್ರಾವತಿಯ ನೆಹರು ನಗರದ ನಿವಾಸಿಯಾದ ಸುನೀಲ್ ಮನೆಯಿಂದ ಕೆಲಸಕ್ಕೆಂದು ಹೋಗುವಾಗ ಏಕಾಏಕಿ ಮುಬಾರಕ್ ಅಲಿಯಾಸ್ ಡಿಜ್ಜಿ ಮುಬಾರಕ್ ಚಾಕುವಿನಿಂದ ಹಲ್ಲೆ ನಡೆಸಿದ್ದ. ಘಟನೆಯ ನಂತರ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ :ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಹಲ್ಲೆ.. ಭದ್ರಾವತಿಯಲ್ಲಿ ಡಿಚ್ಚಿ ಮುಬಾರಕ್ನಿಂದ ಯುವಕನ ಮೇಲೆ ಹಲ್ಲೆ