ಶಿವಮೊಗ್ಗ : ಬಡ ರೋಗಿಗಳಿಗೆ ಆಸ್ಪತ್ರೆಯ ವೆಚ್ಚ ಭರಿಸುವುದು ದೊಡ್ಡ ಸವಾಲಾಗಿತ್ತು. ಇದನ್ನು ಮನಗಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನರಿಕ್ ಮೆಡಿಸಿನ್ ಒಳಗೊಂಡ ಜನೌಷಧ ಕೇಂದ್ರ ಆರಂಭಿಸಿದರು ಎಂದು ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದರು.
'ಬಡ ರೋಗಿಗಗಳ ಕಷ್ಟ ಮನಗಂಡು ಪ್ರಧಾನಿಗಳು ಜನೌಷಧ ಕೇಂದ್ರ ಪ್ರಾರಂಭಿಸಿದ್ರು' - ಜನಸೇವಾ ಕೇಂದ್ರ ಜನೌಷದಿ ಸಪ್ತಾಹ
ಜನೌಷಧ ಕೇಂದ್ರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆ, ವಿಶೇಷ ಸಪ್ತಾಹದ ಅಂಗವಾಗಿ ನಗರದ ಜಿಲ್ಲಾಡಳಿತ ಸಂಭಾಗಣದಲ್ಲಿ ಏರ್ಪಡಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜನೌಷಧಿ ಮಳಿಗೆಗಳ ಮುಖ್ಯಸ್ಥರು ಹಾಗೂ ಫಲಾನುಭವಿಗಳ ಸಭೆಯನ್ನು ಸಂಸದ ಬಿ. ವೈ. ರಾಘವೇಂದ್ರ ಉದ್ಘಾಟಿಸಿದರು.
!['ಬಡ ರೋಗಿಗಗಳ ಕಷ್ಟ ಮನಗಂಡು ಪ್ರಧಾನಿಗಳು ಜನೌಷಧ ಕೇಂದ್ರ ಪ್ರಾರಂಭಿಸಿದ್ರು' Janushadi Saptha celebrated in shivamogga](https://etvbharatimages.akamaized.net/etvbharat/prod-images/768-512-6329251-thumbnail-3x2-byrghavendra.jpg)
ಜನ ಔಷದಿ ಸಪ್ತಾಹ ಕಾರ್ಯಕ್ರಮ
ಜನೌಷಧ ಸಪ್ತಾಹ ಕಾರ್ಯಕ್ರಮ
ಈ ವೇಳೆ ಮಾತನಾಡಿದ ಸಂಸದ ಬಿ. ವೈ. ರಾಘವೇಂದ್ರ, ಬಡವರಿಗೆ ಆಸ್ಪತ್ರೆ ವೆಚ್ಚ ಭರಿಸುವುದು ದೊಡ್ಡ ಸವಾಲಾಗಿತ್ತು. ಇದನ್ನು ಮನಗಂಡ ನರೇಂದ್ರ ಮೋದಿ ಅವರು ಜೆನರಿಕ್ ಮೆಡಿಸಿನ್ ಒಳಗೊಂಡ ಜನೌಷಧ ಕೇಂದ್ರಗಳನ್ನು ಆರಂಭಿಸಿದರು ಎಂದರು.
ಇಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ವಿತರಿಸಲಾಗುತ್ತದೆ. ಇದರಿಂದಾಗಿ ಬಡವರಿಗೆ ಹೆಚ್ಚಿನ ಹಣ ಉಳಿತಾಯವಾಗುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನಷ್ಟು ಜನೌಷಧ ಕೇಂದ್ರಗಳನ್ನು ತೆರೆಯುವುದಾಗಿ ಸಂಸದರು ಭರವಸೆ ನೀಡಿದರು.