ಕರ್ನಾಟಕ

karnataka

ಸದನದೊಳಗೆ ಮೊಬೈಲ್​ನಲ್ಲಿ ಎನೇನೋ ನೋಡುವುದು ಸರಿಯಲ್ಲ.. ಡಿ ಎಸ್‌ ಶಂಕರಮೂರ್ತಿ

ಸದನದೊಳಗಡೆ ಬರುವುದಕ್ಕಿಂತ ಮುಂಚೆ ಮೊಬೈಲ್ ಸ್ವಿಚ್‌ ಆಫ್ ಮಾಡಿ ಬನ್ನಿ ಎಂದು ನಾನು ಸಭಾಪತಿಯಾದ ಸಂದರ್ಭದಲ್ಲಿ ಒಂದು ರೂಲಿಂಗ್ ಮಾಡಿದ್ದೆ. ಅಶ್ಲೀಲ ಹೌದೋ ಅಲ್ಲವೋ ಮುಖ್ಯ ಅಲ್ಲಾ, ಸದನದಲ್ಲಿ ಮೊಬೈಲ್ ನೋಡುವುದು ಪದ್ಧತಿಯಲ್ಲ. ಇಂತಹ ಘಟನೆಗಳಿಂದ ವಿಧಾನ ಪರಿಷತ್ ಘನತೆ, ಗಾಂಭೀರ್ಯಕ್ಕೆ ಧಕ್ಕೆ ಯಾಗುತ್ತದೆ ..

By

Published : Jan 29, 2021, 8:11 PM IST

Published : Jan 29, 2021, 8:11 PM IST

its-not-good-use-mobile-phone-in-the-session
ಡಿಎಸ್​ ಶಂಕರಮೂರ್ತಿ

ಶಿವಮೊಗ್ಗ : ಸದನದೊಳಗಡೆ ಮೊಬೈಲ್​ನಲ್ಲಿ ಏನೇನೋ ನೋಡುವುದು ಸದನಕ್ಕೆ ಘನತೆ ತರುವುದಿಲ್ಲಾ ಎಂದು ಮಾಜಿ ವಿಧಾನ ಪರಿಷತ್ ಸಭಾಪತಿ ಡಿ ಎಸ್ ಶಂಕರರ್ಮೂರ್ತಿ ತಿಳಿಸಿದರು.

ಸದನದೊಳಗೆ ಮೊಬೈಲ್​ನಲ್ಲಿ ಎನೇನೋ ನೋಡುವುದು ಸರಿಯಲ್ಲ..

ಸದನದಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಮೊಬೈಲ್​ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಸದನ ನಡೆಯುವ ಸಮಯದಲ್ಲಿ ಮೊಬೈಲ್ ನೋಡುವುದು ಸರಿಯಲ್ಲ. ಇಂತಹ ಘಟನೆ ನಾನು ಒಪ್ಪುವುದಿಲ್ಲ ಎಂದರು.

ಓದಿ-'ಆ ತರಹದ' ಯಾವುದೇ ವಿಡಿಯೋ ನಾನು ನೋಡಿಲ್ಲ: ಪರಿಷತ್‌ ಕೈ ಸದಸ್ಯ ಪ್ರಕಾಶ್ ರಾಥೋಡ್‌

ಸದನದೊಳಗಡೆ ಬರುವುದಕ್ಕಿಂತ ಮುಂಚೆ ಮೊಬೈಲ್ ಸ್ವಿಚ್‌ ಆಫ್ ಮಾಡಿ ಬನ್ನಿ ಎಂದು ನಾನು ಸಭಾಪತಿಯಾದ ಸಂದರ್ಭದಲ್ಲಿ ಒಂದು ರೂಲಿಂಗ್ ಮಾಡಿದ್ದೆ. ಅಶ್ಲೀಲ ಹೌದೋ ಅಲ್ಲವೋ ಮುಖ್ಯ ಅಲ್ಲಾ, ಸದನದಲ್ಲಿ ಮೊಬೈಲ್ ನೋಡುವುದು ಪದ್ಧತಿಯಲ್ಲ. ಇಂತಹ ಘಟನೆಗಳಿಂದ ವಿಧಾನ ಪರಿಷತ್ ಘನತೆ, ಗಾಂಭೀರ್ಯಕ್ಕೆ ಧಕ್ಕೆ ಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details