ಕರ್ನಾಟಕ

karnataka

ETV Bharat / city

ಜಿಂಕೆ ಬೇಟೆಯಾಡಿ ಮಾಂಸ, ಚರ್ಮ ಮಾರಾಟ ಯತ್ನ: ಕುಂಸಿ ಪೊಲೀಸರಿಂದ ಇಬ್ಬರ ಬಂಧನ - ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿದ ಕುಂಸಿ ಪೊಲೀಸರು

ಕಾಡಿನಲ್ಲಿ ಜಿಂಕೆಯನ್ನು ಬೇಟೆಯಾಡಿ ಮಾಂಸ ಹಾಗೂ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಖದೀಮರನ್ನು ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸರು ಬಂಧಿಸಿದ್ದಾರೆ.

hunting-of-deer-for-sale-meat-and-skin-two-arrested-by-kunsi-police
ಜಿಂಕೆ ಮಾರಾಟ ಯತ್ನ

By

Published : Sep 6, 2020, 7:47 PM IST

ಶಿವಮೊಗ್ಗ: ಜಿಂಕೆಯನ್ನು ಬೇಟೆಯಾಡಿ ಮಾಂಸ ಹಾಗೂ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕುಂಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಂಕೆ ಬೇಟೆಯಾಡಿ ಮಾಂಸ, ಚರ್ಮ ಮಾರಾಟ ಯತ್ನ

ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಆಡುಗಡಿ ಗ್ರಾಮದ ಬಳಿಯ ಮಂಡಗಟ್ಟ ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡಿ ಮಾಂಸ ಹಾಗೂ ಚರ್ಮ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪಿಎಸ್​ಐ ನವೀನ್ ಮಠಪತಿ ನೇತೃತ್ವದ ತಂಡ ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ.

ಆಡುಗಡಿ ಗ್ರಾಮದ ಅನಿಲ್ ಹಾಗೂ ಹನುಮಂತ ಬಂಧಿತ ಆರೋಪಿಗಳು. ಬಂಧಿತರಿಂದ 40 ಕೆ.ಜಿ ಜಿಂಕೆ ಮಾಂಸ, ಚರ್ಮವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details