ಶಿವಮೊಗ್ಗ:ಜಿಲ್ಲೆಯ ಸಾಗರದ ಹೋಟೆಲ್ ಉದ್ಯಮಿ ಇಕ್ಬಾಲ್ ಸಾಬ್ ಎಂಬುವವರು 2,600 ಬಡ ಕುಟುಂಬಗಳಿಗೆ ಶಾಸಕ ಹರತಾಳು ಹಾಲಪ್ಪನವರ ಮೂಲಕ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ.
2,600 ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಹೋಟೆಲ್ ಉದ್ಯಮಿ - ಕೊರೊನಾ ಎಫೆಕ್ಟ್
ಶಿವಮೊಗ್ಗ ಜಿಲ್ಲೆಯ ಸಾಗರದ ಹೋಟೆಲ್ ಉದ್ಯಮಿ ಇಕ್ಬಾಲ್ ಸಾಬ್ ಎಂಬುವವರು 2,600 ಬಡ ಕುಟುಂಬಗಳಿಗೆ 15 ದಿನಗಳಿಗಾಗುವಷ್ಟು ದಿನಸಿ ಕಿಟ್ ನೀಡಿದ್ದಾರೆ.
2,600 ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಹೋಟೆಲ್ ಉದ್ಯಮಿ
ಸಾಗರದ ಗ್ರೀನ್ ಎಂಬಾಸಿ ಹೋಟೆಲ್ನಲ್ಲಿ 15 ದಿನಗಳಿಗಾಗುವಷ್ಟು ದಿನಸಿ ಕಿಟ್ ನೀಡಿದರು. ಈ ವೇಳೆ ಮಾತನಾಡಿದ ಶಾಸಕರು, ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾರೂ ಹಸಿವಿನಿಂದ ಇರಬಾರದು ಎಂದು ಅಕ್ಕಿ ವಿತರಣೆ ಮಾಡಿವೆ. ಮುಂದಿನ ತಿಂಗಳು ಕೇಂದ್ರ ಸರ್ಕಾರ ಅಕ್ಕಿಯನ್ನು ನೀಡಲಿದೆ. ಹಲವರಿಗೆ ಇನ್ನೂ ರೇಷನ್ ಕಾರ್ಡ್ ಸಿಕ್ಕಿಲ್ಲ. ರೇಷನ್ ಕಾರ್ಡ್ ಇಲ್ಲದವರಿಗೆ ಈ ರೀತಿ ದಿನಸಿ ಕಿಟ್ ನೀಡುತ್ತಿರುವುದು ಸಂತಸದ ವಿಚಾರ. ಇನ್ನು,ರಂಜಾನ್ ವೇಳೆಯಲ್ಲಿ ಇಕ್ಬಾಲ್ ಸಾಬ್ ಅವರು ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.