ಶಿವಮೊಗ್ಗ: ರಾಜ್ಯಕ್ಕೆ ವಿಧಿ ವಿಜ್ಞಾನ ವಿಶ್ವ ವಿದ್ಯಾನಿಲಯ ಮಂಜೂರು ಮಾಡಬೇಕೆಂದು ಕೇಂದ್ರದ ಗೃಹ ಸಚಿವ ಅಮಿತಾ ಶಾರಲ್ಲಿ ಮನವಿ ಮಾಡಲಾಗಿದೆ ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತಾ ಶಾ ಅವರು ಮೊನ್ನೆ ರಾತ್ರಿಯಿಂದ ನಿನ್ನೆ ರಾತ್ರಿಯ ತನಕ ನಮ್ಮ ರಾಜ್ಯದ ಪ್ರವಾಸದಲ್ಲಿದ್ದರು. ನಾನೂಬ್ಬ ಗೃಹ ಸಚಿವನಾಗಿ ಅವರ ಮುಂದೆ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದೇನೆ ಎಂದರು.
ಗೃಹ ಸಚಿವರು ನಮ್ಮ ರಾಜ್ಯಕ್ಕೆ ಭೇಟಿ ನೀಡಿದಕ್ಕೆ ನಮಗೆಲ್ಲಾ ತುಂಬ ಸಂತೋಷವಾಗಿದೆ. ನಾನು ನಮ್ಮ ರಾಜ್ಯಕ್ಕೆ ಅನುಕೂಲವಾಗುವಂತಹ ಕರಾವಳಿ ಕಾವಲು ಪಡೆಗೆ 12 ಹೊಸ ಯಾಂತ್ರಿಕೃತ ಬೋಟುಗಳನ್ನು ಕೇಳಿದ್ದೇನೆ. ರಾಜ್ಯದ ಪೊಲೀಸರಿಗೆ ಅವಶ್ಯಕವಾಗಿರುವ ನೆರವನ್ನು ಕೇಳಿದ್ದೇನೆ ಎಂದರು.