ಶಿವಮೊಗ್ಗ:ವಿಪಕ್ಷ ನಾಯಕ ಸಿದ್ದರಾಮಯ್ಯನವರು ತಮ್ಮನ್ನು ಬಿಟ್ಟು ಉಳಿದ ಎಲ್ಲರನ್ನು ಟೀಕಿಸುತ್ತಾರೆ. ಎಲ್ಲರನ್ನು ಟೀಕೆ ಮಾಡುವಂತಹ ಯಾರಾದರೂ ರಾಜಕಾರಣಿ ಇದ್ದರೆ ಅದು ಸಿದ್ದರಾಮಯ್ಯನವರು ಒಬ್ಬರೇ.. ಎಲ್ಲದರಲ್ಲೂ ಸರಿ ಇರುವವರು ಸಿದ್ದರಾಮಯ್ಯನವರು ಮಾತ್ರ ಎಂದು ಅವರು ತಿಳಿದುಕೊಂಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಜಿ ಸಿಎಂರನ್ನು ಟೀಕಿಸಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಗೂತ್ತಾಗಿದೆ, ಕಾಂಗ್ರೆಸ್ ಹೇಗಿದ್ರು ಗೆಲ್ಲೋದಿಲ್ಲ, ಇಡೀ ದೇಶದಲ್ಲಿ ಕಾಂಗ್ರೆಸ್ ಕಳೆದು ಹೋಗಿದೆ. ನಾನು ಈಗ ನಾಲ್ಕು ಮಾತನ್ನು ಆಡೋಣ ಅಂತಾ ಮಾತನಾಡುತ್ತಿದ್ದಾರೆ ಎಂದರು.
ಸಿಐಡಿ ತನಿಖೆ ಮುಗಿದ ತಕ್ಷಣ ಪಿಎಸ್ಐ ಪರೀಕ್ಷೆ:ಪಿಎಸ್ಐ ಪರೀಕ್ಷೆ ಹಗರಣದ ಕುರಿತು ತನಿಖೆ ಮುಗಿಯುತ್ತಿದ್ದಂತಯೇ ಪರೀಕ್ಷಾ ದಿನಾಂಕ ತಿಳಿಸಲಾಗುವುದು. ಪ್ರಕರಣದಲ್ಲಿ ಅಮೃತ ಪಾಲ್ರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವರನ್ನು ಸತತ 7 ಗಂಟೆ ವಿಚಾರಣೆ ನಡೆಸಲಾಗಿದೆ. ಸಿಐಡಿಯಲ್ಲಿ ಸರಿಯಾದ ಸಾಕ್ಷ್ಯಾಧಾರ ಸಿಗುವ ತನಕ ಮುಟ್ಟೋದಿಲ್ಲ. ಸಾಕ್ಷ್ಯಾಧಾರ ಸಿಕ್ಕರೆ ಬಿಡೋದಿಲ್ಲ ಎಂದರು.