ಕರ್ನಾಟಕ

karnataka

ETV Bharat / city

ಈ ದುಷ್ಕೃತ್ಯಕ್ಕೆ ನಮ್ಮ ಸಮಾಜ ಸುಮ್ಮನೆ ಇರುವುದಿಲ್ಲ: ಕೆ.ಎಸ್.ಈಶ್ವರಪ್ಪ

ಹರ್ಷನ ಕೊಲೆ ಸಂದರ್ಭದಲ್ಲಿ ರಾಜೀವ್ ಗಾಂಧಿನಗರದ ಮುಸ್ಲಿಂ ಹಿರಿಯರು ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ವಾಗ್ದಾನ ಮಾಡಿದ್ದರು. ಆದರೆ, ಮುಸ್ಲಿಂ ಹಿರಿಯರು ವಾಗ್ದಾನ ಸುಳ್ಳು ಆಗಿದೆ. ಇದರಿಂದ ಹಿಂದೂ ಸಮಾಜ ಸುಮ್ಮನೆ ಇರುವುದಿಲ್ಲ ಎಂದು‌ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಖಡಕ್ ಎಚ್ಚರಿಕೆ ನೀಡಿದರು.

KS Eshwarappa spoke in Shimoga
ಬಿಜೆಪಿಯ ಬೂತ್ ಕಾರ್ಯಕರ್ತ ಕಾಂತರಾಜು ಭೇಟಿ ಮಾಡಿದ ರಾಘವೇಂದ್ರ ಮತ್ತು ಈಶ್ವರಪ್ಪ

By

Published : Jul 13, 2022, 3:26 PM IST

Updated : Jul 13, 2022, 4:50 PM IST

ಶಿವಮೊಗ್ಗ:ರಾಜೀವ್ ಗಾಂಧಿ ನಗರದಲ್ಲಿ ಮೊನ್ನೆ ದಿನ ಬಿಜೆಪಿಯ ಬೂತ್ ಕಾರ್ಯಕರ್ತ ಕಾಂತರಾಜುವಿನ ಮೇಲೆ ಕೆಲ ಯುವಕರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಇದೀಗ ಕಾಂತರಾಜು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಅವರನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಪ್ರತ್ಯೇಕವಾಗಿ ಭೇಟಿ ಮಾಡಿದರು. ಇಬ್ಬರು ಕಾಂತರಾಜು ಹಾಗೂ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಸ್ವಲ್ಪ ಹಣವನ್ನು ನೀಡಿದರು.

ಕಾಂತರಾಜು ಭೇಟಿ ಬಳಿಕ ಮಾತನಾಡಿದ ಈಶ್ವರಪ್ಪ, ಕೆಲ ಗೂಂಡಾಗಳು ನಡೆಸಿದ ದುಷ್ಕೃತ್ಯವನ್ನು ಸಮಾಜ ಸಹಿಸುವುದಿಲ್ಲ. ಕಳೆದ ಫೆಬ್ರವರಿಯಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷನನ್ನು ರಾಷ್ಟ್ರದ್ರೋಹಿಗಳು ಕೊಲೆ ಮಾಡಿದ್ದರು. ಇಂತಹ ರಾಷ್ಟ್ರ ದ್ರೋಹಿಗಳಿಗೆ ಸರಿಯಾದ ಉತ್ತರ ಕೊಡುಬೇಕು‌ ಅಂತ ಎನ್​ಐಎ ತನಿಖೆಗೆ ಒತ್ತಾಯಿಸಲಾಗಿದೆ. ಕೇಂದ್ರ ಸರ್ಕಾರ ಅದರಂತೆ ಹರ್ಷ ಕೊಲೆ ಪ್ರಕರಣವನ್ನು ಎನ್​ಐಎಗೆ ವಹಿಸಿದೆ. ಕೇಂದ್ರ ಸರ್ಕಾರ ಕಠಿಣ ಕ್ರಮಕೊಳ್ಳುವ ವಿಶ್ವಾಸವಿದೆ.‌ ಇದೀಗ ನಮ್ಮ ರಾಜೀವ್ ಗಾಂಧಿ ನಗರದ ಬೂತ್ ಅಧ್ಯಕ್ಷ ಕಾಂತರಾಜುವಿನ ಮೇಲೆ ಹಲ್ಲೆ ನಡೆಸಲಾಗಿದೆ.

ಬಿಜೆಪಿಯ ಬೂತ್ ಕಾರ್ಯಕರ್ತ ಕಾಂತರಾಜು ಭೇಟಿ ಮಾಡಿದ ರಾಘವೇಂದ್ರ ಮತ್ತು ಈಶ್ವರಪ್ಪ

ಮನೆಯಿಂದ ಮೂತ್ರ ವಿಸರ್ಜನೆಗೆ ಹೊರ ಬಂದ ವೇಳೆ ಅದೇ ಏರಿಯಾದ ಕೆಲ ಯುವಕರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ‌ ಕಾಂತರಾಜು ಕೈ ತಡೆಯದೆ ಹೋಗಿದ್ರೆ, ಆತನ ತಲೆಯೇ ಹಾರಿಹೋಗುತ್ತಿತ್ತು. ಹರ್ಷನ ಕೊಲೆ ಸಂದರ್ಭದಲ್ಲಿ ರಾಜೀವ್ ಗಾಂಧಿನಗರದ ಇನ್ನೂ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ವಾಗ್ದಾನ ಮಾಡಿದ್ದರು. ಆದರೆ ವಾಗ್ದಾನ ಸುಳ್ಳು ಆಗಿದೆ. ಇದರಿಂದ ಹಿಂದೂ ಸಮಾಜ ಸುಮ್ಮನೆ ಇರುವುದಿಲ್ಲ ಎಂದು‌ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಖಡಕ್ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಹಲ್ಲೆಗೊಳಗಾದ ಭಜರಂಗದಳ ಕಾರ್ಯಕರ್ತನ ಆರೋಗ್ಯ ವಿಚಾರಿಸಿದ ಬಿಜೆಪಿ ನಾಯಕರು

ಇದಕ್ಕೂ ಮುನ್ನ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ ರವರು, ಕಾಂತರಾಜುವಿನ ಬಳಿ ಹಲ್ಲೆ ನಡೆದ ಬಗ್ಗೆ ಮಾಹಿತಿ ಪಡೆದುಕೊಂಡರು. ನಿಮ್ಮ ಕುಟುಂಬ ಧೈರ್ಯವಾಗಿರಬೇಕು. ನಿಮ್ಮ ಜೊತೆ ನಾವಿದ್ದೇವೆ.‌ ಈ ರೀತಿ ಹಲ್ಲೆ ನಡೆಸಿ ಸಮಾಜದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿರುವ ಕಿಡಿಗೇಡಿಗಳಿಗೆ ಕಾನೂನಿ ಅಡಿ ತಕ್ಕ ಶಿಕ್ಷೆಯಾಗಬೇಕು. ಆಗ ಮಾತ್ರ ಉಳಿದವರು ಮುಂದೆ ಇಂತಹ ಕೃತ್ಯಕ್ಕೆ ಕೈ ಹಾಕುವುದಿಲ್ಲ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೆನೆ ಎಂದು ಹೇಳಿದರು.

Last Updated : Jul 13, 2022, 4:50 PM IST

For All Latest Updates

ABOUT THE AUTHOR

...view details