ಶಿವಮೊಗ್ಗ: ನ್ಯಾಯವಾದಿ ಸಂಜೀವ ಪುನಾಳಕರ ಹಾಗೂ ವಿಕ್ರಮ ಭಾವೆರವರ ಬಂಧನ ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಂಜೀವ ಪುನಾಳಕರ ಹಾಗೂ ವಿಕ್ರಮ ಭಾವೆ ಬಂಧನ ಖಂಡಿಸಿ ಪ್ರತಿಭಟನೆ ನರೇಂದ್ರ ದಾಬೋಲ್ಕರ್ ಹತ್ಯೆ ಹಿನ್ನೆಲೆಯಲ್ಲಿ ಸಾಕಷ್ಟು ಹಿಂದೂ ಸಂಘಟನೆಯ ಅಮಾಯಕರ ಬಂಧನವಾದಾಗ ನ್ಯಾಯವಾದಿ ಸಂಜೀವ ಪುನಾಳಕರರವರು ಸಾಕಷ್ಟು ಹೋರಾಟ ನಡೆಸಿ, ನ್ಯಾಯಾಲಯದಲ್ಲಿ ವಾದ ಮಂಡಿಸಿ ಬಿಡುಗಡೆ ಮಾಡಿಸಿದ್ದರು. ಪ್ರಮುಖವಾಗಿ ಹಾಲಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ರ ಬಿಡುಗಡೆಯಲ್ಲಿ ನ್ಯಾಯವಾದಿ ಸಂಜೀವ ಪುನಾಳಕರ ರವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಪ್ರತಿಭಟನಾಕಾರರು ತಿಳಿಸಿದರು.
ಇನ್ನು ವಿಕ್ರಮ ಭಾವೆ ರವರು ಆರ್ಟಿಐ ಕಾರ್ಯಕರ್ತರಾಗಿದ್ದು, ಇವರು ಮಹಾರಾಷ್ಟ್ರದ ದೇವಾಲಯಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಹೊರ ಹಾಕಿದ್ದರು. ಮಾಲೆಗಾಂವ್ ಸ್ಟೋಟದ ಹಿಂದಿನ ಅದೃಶ್ಯ ಕೈ ಎಂಬ ಪುಸ್ತಕ ಬರೆದಿದ್ದಾರೆ. ಇದರಿಂದ ಕೋಪಗೊಂಡ ಕೆಲ ಅಧಿಕಾರಿಗಳು ವಿಕ್ರಮ ಭಾವೆರನ್ನು ಸುಖಾ ಸುಮ್ಮನೆ ಬಂಧಿಸಿದ್ದಾರೆ. ಇದರಿಂದ ತಕ್ಷಣ ನ್ಯಾಯವಾದಿ ಸಂಜೀವ ಪುನಾಳಕರ ಹಾಗೂ ವಿಕ್ರಮ ಭಾವೆರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಜೊತೆಗೆ ಜಾತ್ಯಾತೀತವಾದಿಗಳು ದೇಶವನ್ನು ಅಪಾಯದ ಅಂಚಿಗೆ ನೂಕುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾ ವೇಳೆಯಲ್ಲಿ ವಿಜಯ್ ರೇವಣ್ಕರ್, ವೆಂಕಟೇಶ್, ಪವನ್, ಅಶ್ವಿನಿ, ಸೌಮ್ಯ , ಶಬರಿಷ್ ಸೇರಿದಂತೆ ಇತರರು ಹಾಜರಿದ್ದರು.