ಕರ್ನಾಟಕ

karnataka

ETV Bharat / city

ಭಾಗವಾಧ್ವಜ ತೆಗೆದ ಆರೋಪ : ಸಾಗರದಲ್ಲಿ ರಾತ್ರೋರಾತ್ರಿ ಹಿಂದೂ ಪರ ಸಂಘಟನೆಗಳ ದಿಢೀರ್ ಪ್ರತಿಭಟನೆ - Protest in shivamogga

ಶಿವಾಜಿ ಜಯಂತಿ ಪ್ರಯುಕ್ತ ಭಗವಾಧ್ವಜ ಹಾಕಲಾಗಿತ್ತು. ಅದನ್ನು ನಾವೇ ತೆರವು ಮಾಡುತ್ತಿದ್ದೆವು. ಸದ್ಯ ಸಾಗರದ ಇತಿಹಾಸ ಪ್ರಸಿದ್ಧ ಗಣಪತಿ ದೇವಸ್ಥಾನ ಜಾತ್ರಾ ಮಹೋತ್ಸವ ನಡೆಯಲಿದ್ದು, ಜಾತ್ರೆಯ ನಂತರ ಭಗವಾಧ್ವಜ ತೆಗೆಯಲಾಗುತ್ತಿತ್ತು. ಆದರೆ, ಪೊಲೀಸ್ ಇಲಾಖೆಯಿಂದ ನಮಗೆ ಯಾವುದೇ ಮಾಹಿತಿ ಇಲ್ಲದೇ ರಾತ್ರಿ ಸಂದರ್ಭದಲ್ಲಿ ಏಕಾಏಕಿ ಭಗವಾಧ್ವಜ ತೆರವು ಮಾಡಲು ಮುಂದಾಗಿದ್ದು ಖಂಡನೀಯ ಎಂದು ಕಿಡಿಕಾರಿದರು..

hindu activists Protest in sagar
ಪ್ರತಿಭಟನಾ ನಿರತರು

By

Published : Apr 1, 2022, 12:22 PM IST

ಶಿವಮೊಗ್ಗ :ಸಾಗರ ನಗರಕ್ಕೆ ಸ್ವಾಗತ ಕಮಾನಿಗೆ ಹಾಕಲಾಗಿದ್ದ ಭಗವಾಧ್ವಜವನ್ನು ಯಾವುದೇ ಮಾಹಿತಿ ನೀಡದೆ ಇಳಿಸಲಾಗಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದಿಢೀರ್ ರಸ್ತೆ ತಡೆ ನಡೆಸಿ ಪೊಲೀಸ್ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿರುವ ಘಟನೆ ನಿನ್ನೆ(ಗುರುವಾರ) ರಾತ್ರಿ ನಡೆದಿದೆ.

ಕಳೆದ ವಾರ ಸಾಗರದಲ್ಲಿ ನಡೆದ 392ನೇ ಶಿವಾಜಿ ಮಹಾರಾಜರ ಜಯಂತಿ ಹಾಗೂ ಹಿಂದೂ ಸಾಮ್ರಾಜ್ಯೋತ್ಸವ ಪ್ರಯುಕ್ತ ಸಾಗರ ನಗರಕ್ಕೆ ಪ್ರವೇಶ ದ್ವಾರಕ್ಕೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಭಗವಾಧ್ವಜ ಹಾಕಲಾಗಿತ್ತು.

ಸಾಗರದಲ್ಲಿ ರಾತ್ರೋರಾತ್ರಿ ಹಿಂದೂ ಪರ ಸಂಘಟನೆಗಳ ದಿಢೀರ್ ಪ್ರತಿಭಟನೆ

ಆದರೆ, ಗುರುವಾರ ರಾತ್ರಿ ಪೊಲೀಸ್ ಇಲಾಖೆಯಿಂದ ಸಂಘಟನೆಗೆ ಯಾವುದೇ ಮಾಹಿತಿ ನೀಡದೆ ಭಗವಾಧ್ವಜ ತೆರವುಗೊಳಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಶಿವಾಜಿ ಜಯಂತಿ ಪ್ರಯುಕ್ತ ಭಗವಾಧ್ವಜ ಹಾಕಲಾಗಿತ್ತು. ಅದನ್ನು ನಾವೇ ತೆರವು ಮಾಡುತ್ತಿದ್ದೆವು. ಸದ್ಯ ಸಾಗರದ ಇತಿಹಾಸ ಪ್ರಸಿದ್ಧ ಗಣಪತಿ ದೇವಸ್ಥಾನ ಜಾತ್ರಾ ಮಹೋತ್ಸವ ನಡೆಯಲಿದ್ದು, ಜಾತ್ರೆಯ ನಂತರ ಭಗವಾಧ್ವಜ ತೆಗೆಯಲಾಗುತ್ತಿತ್ತು. ಆದರೆ, ಪೊಲೀಸ್ ಇಲಾಖೆಯಿಂದ ನಮಗೆ ಯಾವುದೇ ಮಾಹಿತಿ ಇಲ್ಲದೇ ರಾತ್ರಿ ಸಂದರ್ಭದಲ್ಲಿ ಏಕಾಏಕಿ ಭಗವಾಧ್ವಜ ತೆರವು ಮಾಡಲು ಮುಂದಾಗಿದ್ದು ಖಂಡನೀಯ ಎಂದು ಕಿಡಿಕಾರಿದರು.

ರಾತ್ರಿ ದಿಢೀರ್​​ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಪ್ರತಿಭಟನೆಯಿಂದ ಕೆಲ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಸಾಗರ, ಶಿರಸಿ, ಕಾರವಾರದಿಂದ ಬೆಂಗಳೂರಿಗೆ ಹೊರಡುತ್ತಿದ್ದ ಬಸ್​​ಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಆಗಮಿಸಿದ ಹೈವೇ ಪೆಟ್ರೋಲಿಂಗ್ ಪೊಲೀಸ್ ವಾಹನ ಸಿಬ್ಬಂದಿ ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇನ್ನು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಆಗಮಿಸಿದ ಹಿಂದೂಪರ ಸಂಘಟನೆಯ ಹಿರಿಯ ಮುಖಂಡರಾದ ಐ.ವಿ ಹೆಗಡೆ, ವಕೀಲ ರವೀಶ್ ಹಾಗೂ ಇನ್ನಿತರರು ಕಾರ್ಯಕರ್ತರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನೂ ಓದಿ:ನಯರ ಕಂಪನಿ ವಿರುದ್ಧ ತಿರುಗಿಬಿದ್ದ ಪೆಟ್ರೋಲ್ ಬಂಕ್ ಮಾಲೀಕರು: ರಸ್ತೆಗಿಳಿದು ಪ್ರತಿಭಟನೆ

ABOUT THE AUTHOR

...view details