ಕರ್ನಾಟಕ

karnataka

ETV Bharat / city

ವರುಣನ ಆರ್ಭಟಕ್ಕೆ ನವುಲೇ ಕ್ರಿಕೆಟ್ ಸ್ಟೇಡಿಯಂ ಸಂಪೂರ್ಣ ಜಲಾವೃತ.. - ಶಿವಮೊಗ್ಗದ ಮಳೆ ಸುದ್ದಿ

ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಶಿವಮೊಗ್ಗದಲ್ಲಿ ನವುಲೇ ಕ್ರೀಡಾಂಗಣ ಎಂದು ಕರೆಯುವ ಕೆಎಸ್​ಸಿಎ ಸ್ಟೇಡಿಯಂ ಸಂಪೂರ್ಣ ಜಲಾವೃತಗೊಂಡಿದೆ.

ಕೆಎಸ್​ಸಿಎ ಕ್ರಿಕೆಟ್ ಸ್ಟೇಡಿಯಂ ಸಂಪೂರ್ಣ ಜಲಾವೃತ

By

Published : Oct 22, 2019, 11:54 PM IST

ಶಿವಮೊಗ್ಗ:ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಗರದ ಹೊರ ವಲದಲ್ಲಿರುವ ಕೆಎಸ್​ಸಿಎ ಕ್ರಿಕೆಟ್ ಸ್ಟೇಡಿಯಂ ಸಂಪೂರ್ಣ ಜಲಾವೃತಗೊಂಡಿದೆ.

ಕೆಎಸ್​ಸಿಎ ಕ್ರಿಕೆಟ್ ಸ್ಟೇಡಿಯಂ ಸಂಪೂರ್ಣ ಜಲಾವೃತ..

26 ಎಕರೆ ವಿಸ್ತೀರ್ಣದಲ್ಲಿರುವ ನವುಲೇ ಕ್ರೀಡಾಂಗಣ ಎಂದು ಕರೆಯುವ ಕೆಎಸ್​ಸಿಎ ಸ್ಟೇಡಿಯಂನಲ್ಲಿ ಅನೇಕ ರಣಜಿ ಪಂದ್ಯಗಳು ಸಹ ನಡೆದಿವೆ. ಆದರೆ, ಇದೀಗ ಭಾರಿ ಮಳೆಯಿಂದಾಗಿ ಸ್ಟೇಡಿಯಂ ಮೈದಾನ ಸಂಪೂರ್ಣ ಜಲಾವೃತಗೊಂಡು ಕೆರೆಯಂತೆ ಕಾಣುತ್ತಿದೆ.

ಈ ಹಿಂದೆ 47 ಎಕರೆ ವಿಸ್ತೀರ್ಣದಲ್ಲಿ ನವುಲೇ ಕೆರೆ ಇತ್ತು. ಆ ಕೆರೆಯ 27 ಎಕರೆ ಭೂಮಿಯನ್ನು ಕೆಎಸ್​ಸಿಎಗೆ ಮಾರಾಟ ಮಾಡಲಾಗಿದೆ. ಉಳಿದ ಕೆರೆ ಜಾಗದ ಮಧ್ಯದಲ್ಲಿ ಶಿವಮೊಗ್ಗದಿಂದ ಹಾನಗಲ್ ಹೋಗುವ ಹೆದ್ದಾರಿ ರಸ್ತೆ ಸಹ ಹಾದು ಹೋಗಿದೆ. ಹಾಗಾಗಿ ಕೆರೆ ಒತ್ತುವರಿಯಾಗಿರುವ ಕಾರಣ ಕೆರೆಗೆ ಬರುವ ನೀರೆಲ್ಲ ಮೈದಾನಕ್ಕೆ ನುಗ್ಗಿ ಕ್ರೀಡಾಂಗಣ ಸಂಪೂರ್ಣ ಜಲಾವೃತಗೊಂಡಿದೆ.

ABOUT THE AUTHOR

...view details