ಶಿವಮೊಗ್ಗ:ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಪ್ರಿಲ್ 14ರಿಂದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ಸಮೀಕ್ಷೆ ನಡೆಸಲಿದ್ದಾರೆ ಎಂದು ಆಯುಕ್ತ ಚಿದಾನಂದ ವಟಾರೆ ತಿಳಿಸಿದ್ದಾರೆ.
ಕೊರೊನಾ ಸೋಂಕು ಹರಡುವುದನ್ನ ತಡೆಯಲು ಸರ್ಕಾರದ ನಿರ್ದೇಶನದ ಪ್ರಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಶಿವಮೊಗ್ಗದಲ್ಲಿ ಇದುವರೆಗೆ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿದಾಗ ಕೇಳುವ ಮಾಹಿತಿಗಳನ್ನ ಎಲ್ಲರೂ ಸರಿಯಾಗಿ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಲಾಕ್‍ಡೌಡನ್ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ಊಟ ಹಾಗೂ ಪಡಿತರ ಸಾಮಾಗ್ರಿ ವಿತರಿಸಲು ಬಯಸುವ ಸಂಘ ಸಂಸ್ಥೆಗಳು, ಸಾಮಾಗ್ರಿಗಳನ್ನು ಮಹಾನಗರ ಪಾಲಿಕೆಯಲ್ಲಿ ತೆರೆಯಲಾಗಿರುವ ಆಹಾರ ಧಾನ್ಯದ ಸ್ವೀಕೃತಿ ಕೇಂದ್ರಕ್ಕೆ (ಸಿದ್ಧಪಡಿಸಿದ ಆಹಾರ ಹೊರತುಪಡಿಸಿ) ನೀಡಿ ಸ್ವೀಕೃತಿ ಪಡೆಯಬೇಕು.
ಒಂದು ವೇಳೆ ಸಿದ್ಧಪಡಿಸಿದ ಆಹಾರ ವಿತರಿಸಲು ಇಚ್ಛಿಸಿದಲ್ಲಿ ಪಾಲಿಕೆಯಿಂದ ಅನುಮತಿ ಪಡೆದು ನಿಯುಕ್ತಿಯಾದ ಅಧಿಕಾರಿ ತಂಡಗಳ ನಿಗಾದಲ್ಲಿ ಆಹಾರ ವಿತರಿಸಬಹುವುದಾಗಿದೆ. ಸಾಮಾಜಿಕ ಅಂತರ ಮತ್ತಿತರ ನಿಯಮಗಳನ್ನು ಉಲ್ಲಂಘಿಸದೆ, ನಿರಾಶ್ರಿತರಿಗೆ ಆಹಾರ, ಧಾನ್ಯದ ಕಿಟ್ ತಲುಪಿಸುವಲ್ಲಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.