ಶಿವಮೊಗ್ಗ: ನಗರದ ಗೆಳೆಯರೇ ಸೇರಿಕೊಂಡು 'ಗುಯ್ಯ ಗುಯ್ಯ' ಎಂಬ ಕನ್ನಡ ವಿಡಿಯೋ ಆಲ್ಬಮ್ ಸಾಂಗ್ ರಚಿಸಿದ್ದು, ಆಗಸ್ಟ್ 31 ರ ಸಂಜೆ 5 ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಇದರ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಆಲ್ಬಮ್ ಸಾಂಗ್ನ ನಿರ್ದೇಶಕ ಸೈಯದ್ ಅಹಮದ್ ತಿಳಿಸಿದರು.
ಗುಯ್ಯ ಗುಯ್ಯ... ಶಿವಮೊಗ್ಗ ಯುವಕರ ವಿಡಿಯೋ ಆಲ್ಬಮ್ ಸಾಂಗ್ ಬಿಡುಗಡೆಗೆ ಸಿದ್ಧ - ಸೈಯದ್ ಅಹಮದ್
ಶಿವಮೊಗ್ಗದ ಯುವಕರ ಗುಂಪೊಂದು ಸೇರಿ ರಚಿಸಿರುವ 'ಗುಯ್ಯ ಗುಯ್ಯ' ಎಂಬ ಕನ್ನಡ ವಿಡಿಯೋ ಆಲ್ಬಮ್ ಸಾಂಗ್ ಬಿಡುಗಡೆಗೆ ಸಿದ್ಧವಾಗಿದೆ.
ಗುಯ್ಯ ಗುಯ್ಯ... ಶಿವಮೊಗ್ಗ ಯುವಕರ ವಿಡಿಯೋ ಆಲ್ಬಮ್ ಬಿಡುಗಡೆಗೆ ಸಿದ್ಧ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೊಂದು ಮದ್ಯದ ಹಾಡಿಗೆ ಸಂಬಂಧಿಸಿದ್ದು, ಯುವಕರ ಸಂತೋಷ, ಸಂಭ್ರಮ ಚೆಲ್ಲಾಟಗಳನ್ನು ಈ ಹಾಡಿನಲ್ಲಿ ವ್ಯಕ್ತಪಡಿಸಲಾಗಿದೆ. 3 ನಿಮಿಷದ ವಿಡಿಯೋ ಆಲ್ಬಮ್ ಸಾಂಗ್ನ ಚಿತ್ರೀಕರಣವನ್ನು ಶಿವಮೊಗ್ಗದ ಗಾಡಿಕೊಪ್ಪ ಸುತ್ತಮುತ್ತಲು ಚಿತ್ರೀಕರಿಸಲಾಗಿದೆ. ಇದರಲ್ಲಿ 100ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದು, ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಎಂದರು.
ಯುವಕರ ಭಾವನೆಗಳೇ ಇಲ್ಲಿ ಪ್ರಮುಖವಾಗಿವೆ. ಹಾಗೆಯೇ ಮುಂದಿನ ದಿನಗಳಲ್ಲಿ ಉತ್ತಮ ಸಂದೇಶ ಸಾರುವ ವಿಡಿಯೋ ಸಾಂಗ್ಗಳನ್ನು ನಿರ್ಮಿಸಲಾಗುವುದು ಎಂದು ಸೈಯದ್ ಅಹಮದ್ ತಿಳಿಸಿದರು .