ಶಿವಮೊಗ್ಗ: ಗಣಪತಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ವಿನಾಯಕನನ್ನು ಬರಮಾಡಿಕೊಳ್ಳಲು ಎಲ್ಲರೂ ಸಡಗರ ಸಂಭ್ರಮದಿಂದ ಕಾಯುತ್ತಿದ್ದಾರೆ.
ಗಣೇಶ ಚತುರ್ಥಿಗೆ ದಿನಗಣನೆ: ಮಾರುಕಟ್ಟೆಗೆ ಬಂದ ವಿಘ್ನವಿನಾಶಕ - ವಿಘ್ನ ನಿವಾರಕ
ಗಣಪತಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ವಿನಾಯಕನನ್ನು ಬರಮಾಡಿಕೊಳ್ಳಲು ಎಲ್ಲರೂ ಕಾಯುತ್ತಿದ್ದಾರೆ. ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ಗಣಪತಿ ಮೂರ್ತಿಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ.
ನಗರದ ಸೈನ್ಸ್ ಮೈದಾನದಲ್ಲಿ ಗಣಪತಿ ಮೂರ್ತಿಗಳ ಮಾರಾಟ ಜೋರಾಗಿಯೇ ನಡೆಯುತ್ತಿದ್ದು, ಒಂದು ವಾರದಿಂದ ಮಾರ್ಕೆಟ್ಗೆ ಗಣಪತಿ ಮೂರ್ತಿಗಳು ಲಗ್ಗೆ ಇಟ್ಟಿವೆ. ಜೊತೆಗೆ ಮಾರಾಟಗಾರರು ಸಹ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಮಾರುಕಟ್ಟೆಗೆ ಬಂದಿರುವ ವಿವಿಧ ಗಣಪತಿ ಮೂರ್ತಿಗಳು ನೋಡುಗರನ್ನ ಸೆಳೆಯುತ್ತಿವೆ. ಹಾಗೆಯೇ ಮೂರ್ತಿಗಳನ್ನು ಕೊಂಡುಕೊಳ್ಳಲು ಜನ ಮುಂದಾಗಿದ್ದಾರೆ.
ಇನ್ನು 500 ರೂ.ನಿಂದ 15,000 ರೂ.ವರೆಗಿನ ಗಣಪತಿ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಆದರೆ ವ್ಯಾಪಾರ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಮೂರ್ತಿ ಮಾರಾಟಗಾರ ಗಣೇಶ್ ಹೆಚ್.ಎಂ. ಬೇಸರ ವ್ಯಕ್ತಪಡಿಸಿದ್ದಾರೆ.