ಕರ್ನಾಟಕ

karnataka

ETV Bharat / city

ಸಾಗರದಲ್ಲಿ ನೆರೆ ಸಂತ್ರಸ್ತರಿಗಾಗಿ ಪಾದಯಾತ್ರೆ ಮೂಲಕ ನಿಧಿ ಸಂಗ್ರಹ - ಮುಖ್ಯಮಂತ್ರಿ ಪರಿಹಾರ ನಿಧಿ

ರಾಜ್ಯದ ನೆರೆ ಸಂತ್ರಸ್ತರಿಗಾಗಿ ಸಾಗರ ತಾಲೂಕು ಆಡಳಿತ ವತಿಯಿಂದ ಪಾದಯಾತ್ರೆ ಮೂಲಕ ನಿಧಿ ಸಂಗ್ರಹಿಸಲಾಯಿತು. ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಸಂಘ ಸಂಸ್ಥೆಗಳ ಸದಸ್ಯರು ಮತ್ತು ತಾಲೂಕಿನ ಅಧಿಕಾರಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Hiking by Fund-collecting for flood victims

By

Published : Aug 22, 2019, 6:38 PM IST

ಶಿವಮೊಗ್ಗ: ಪ್ರವಾಹ ಸಂತ್ರಸ್ತರಿಗಾಗಿ ಸಾಗರ ತಾಲೂಕು ಆಡಳಿತ ವತಿಯಿಂದ ಪಾದಯಾತ್ರೆ ಮೂಲಕ ನಿಧಿ ಸಂಗ್ರಹಿಸಲಾಯಿತು. ಸಾಗರ ಉಪವಿಭಾಗಾಧಿಕಾರಿ ಕಚೇರಿಯ ಮುಂಭಾಗದಿಂದ ಬೆಳಗ್ಗೆ ಆರಂಭವಾಗಿದ್ದ ಈ ಪಾದಯಾತ್ರೆ ಮಧ್ಯಾಹ್ನದ ವೇಳೆಗೆ ಸಮಾಪ್ತಿಗೊಂಡಿತು.

ಶಾಸಕ ಹರತಾಳು ಹಾಲಪ್ಪ, ಎ.ಸಿ ದರ್ಶನ್, ವಿವಿಧ ಸಂಘಟನೆಗಳ ಸದಸ್ಯರು ಸೇರಿದಂತೆ ತಾಲೂಕು ಅಧಿಕಾರಿಗಳು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ‌ ಅಂಗಡಿ-ಮುಂಗಟ್ಟುಗಳಿಂದ ನಿಧಿ ಸಂಗ್ರಹಿಸಲಾಯಿತು.

ಪಾದಯಾತ್ರೆ ಮೂಲಕ ನಿಧಿ ಸಂಗ್ರಹ

ಕಳೆದ ವರ್ಷ ಕೊಡಗಿನ ಸಂತ್ರಸ್ತರಿಗಾಗಿ ಇದೇ ರೀತಿ ಪಾದಯಾತ್ರೆ ಮಾಡಲಾಗಿತ್ತು. ಸಾರ್ವಜನಿಕರು ಎ.ಸಿ ದರ್ಶನ್​ ಅವರನ್ನು ಭೇಟಿಯಾಗಿ ಪರಿಹಾರ ನೀಡಬಹುದು ಎಂದು ಶಾಸಕ ಹರತಾಳು ಹಾಲಪ್ಪ ಮನವಿ ಮಾಡಿದ್ದಾರೆ.

ABOUT THE AUTHOR

...view details