ಕರ್ನಾಟಕ

karnataka

ETV Bharat / city

ಸರ್ಕಾರಿ ಗೌರವ ಇಲ್ಲದೆ ಸ್ವಾತಂತ್ರ್ಯ ಹೋರಾಟಗಾರರ ಅಂತ್ಯಸಂಸ್ಕಾರ - ಈಸೂರು ದಂಗೆ

ಈಸೂರು ದಂಗೆ ಹೋರಾಟದ ಕೊನೆ ಕೊಂಡಿಯಾಗಿದ್ದ ಹುಚ್ಚರಾಯಪ್ಪ (104) ಮೃತಪಟ್ಟಿದ್ದು, ಸರ್ಕಾರಿ ಗೌರವ ಇಲ್ಲದೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಹುಚ್ಚರಾಯಪ್ಪ
ಹುಚ್ಚರಾಯಪ್ಪ

By

Published : Aug 19, 2020, 3:13 AM IST

ಸಿಎಂ ತವರು ಕ್ಷೇತ್ರದಲ್ಲೆ ಮೃತ ಸ್ವಾತಂತ್ರ್ಯ ಹೋರಾಟಗಾರರಿಗಿಲ್ಲ ಸರ್ಕಾರಿ ಗೌರವ.

ಶಿವಮೊಗ್ಗ: ಸಿಎಂ ತವರು ಕ್ಷೇತ್ರ ಶಿಕಾರಿಪುರದಲ್ಲಿ ಮೃತಪಟ್ಟ ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರಿ ಗೌರವಿಲ್ಲದೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮಂಗಳವಾರ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಹುಚ್ಚರಾಯಪ್ಪ(104) ವಯೋ ಸಹಜ ಸಾವಿಗೆ ಈಡಾಗಿದ್ದರು. ಈಸೂರು ಪ್ರಥಮ ಸ್ವಾತಂತ್ರ್ಯ ಸಂಗ್ರಮದ ಕಿಚ್ಚು ಹಚ್ಚಿದ್ದ ಗ್ರಾಮ. ಈ ಗ್ರಾಮದ ಶತಾಯುಷಿ ಹುಚ್ಚರಾಯಪ್ಪ ಸಾವನ್ನಪ್ಪಿದ್ದಾರೆ.

ಕನಿಷ್ಟ ಸರ್ಕಾರಿ ಅಧಿಕಾರಿಗಳು ಕೂಡ ಗ್ರಾಮಕ್ಕೆ ಭೇಟಿ ನೀಡಿಲ್ಲ. ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರಿ ಗೌರವ ಸಲ್ಲಿಸದೆ ಇರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಚ್ಚರಾಯಪ್ಪ ಈಸೂರು ದಂಗೆ ಹೋರಾಟದ ಕೊನೆ ಕೊಂಡಿಯಾಗಿದ್ದರು.

ABOUT THE AUTHOR

...view details