ಶಿವಮೊಗ್ಗ:ಆಯುಧ ಪೂಜೆಗೂ ಮುನ್ನ ವಿಕಲಚೇತನರಿಗೆ ಸಂಸದ ಬಿ.ವೈ.ರಾಘವೇಂದ್ರ ನಾಲ್ಕು ಚಕ್ರದ ವಾಹನಗಳನ್ನು ವಿತರಣೆ ಮಾಡಿದರು. ನಗರದ ಶಾರದಾ ದೇವಿ ಅಂಧರ ಶಾಲೆಯ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಸದರು, ಈ ವಾಹನವನ್ನು ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಅರ್ಹ ಫಲಾನುಭವಿಗಳಿಗೆ ನಾಲ್ಕು ಚಕ್ರದ ವಾಹನ ಹಸ್ತಾಂತರ - eligible beneficiaries
ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಇಂದು ನಾಲ್ಕು ಚಕ್ರದ ವಾಹನ ಹಸ್ತಾಂತರಿಸಿದರು. ದಸರಾ ವೇಳೆ ವಾಹನ ಹಸ್ತಾಂತರಿಸಿದ್ದಕ್ಕೆ ವಿಕಲಚೇತನರು ಹರ್ಷ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಅವರು, ದಸರಾ ವೇಳೆ ವಿಕಲಚೇತನರಿಗೆ ಈ ವಾಹನ ನೀಡುತ್ತಿರುವುದು ಸಂತಸದ ವಿಚಾರವಾಗಿದೆ. ಇಲಾಖೆಯು ಈ ವರ್ಷ ಜಿಲ್ಲೆಯ 25 ಫಲಾನುಭವಿಗಳಿಗೆ ಮಂಜೂರು ಮಾಡಿದೆ. ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಲ್ಯಾಣ ಇಲಾಖೆಯು ವಿಕಲಚೇತನರ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಈ ನಾಲ್ಕು ಚಕ್ರದ ವಾಹನವನ್ನು ವಿತರಿಸಲಾಗುತ್ತಿದೆ. ಈ ವಾಹನದ ಸಂಪೂರ್ಣ ಲಾಭವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು. ಮನೆಯ ಇತರ ಸದಸ್ಯರು ಈ ವಾಹನವನ್ನು ಬಳಸಿಕೊಳ್ಳಬಾರದು ಎಂದು ವಿನಂತಿಸಿಕೊಂಡರು.
ಇಷ್ಟು ದಿನ ನಾವು ಎಲ್ಲಿಗಾದರೂ ಹೋಗಬೇಕಾದರೆ ಬೇರೆಯವರ ಸಹಾಯ ಕೇಳಬೇಕಿತ್ತು. ಈ ನಾಲ್ಕು ಚಕ್ರದ ವಾಹನವನ್ನು ವಿತರಿಸಿದ್ದರಿಂದ ಈಗ ನಮಗೆ ಅನುಕೂಲಕರವಾಗಿದೆ ಎಂದು ವಿಕಲಚೇತನರು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ದೂಡಾದ ಅಧ್ಯಕ್ಷ ಜ್ಯೋತಿ ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ವಿಕಲಚೇತನರು ಹಾಜರಿದ್ದರು.