ಶಿವಮೊಗ್ಗ:ಬಹಳ ವರ್ಷಗಳಿಂದ ಕರ್ನಾಟಕದಿಂದ ಯಾರನ್ನೂ ಬಿಜೆಪಿ ಕೇಂದ್ರ ಸರ್ಕಾರ ರಾಜ್ಯಪಾಲರನ್ನಾಗಿ ನೇಮಿಸಿಲ್ಲ. ಕೇಂದ್ರ ಸರ್ಕಾರದ ಬಳಿ ನನಗೆ ರಾಜ್ಯಪಾಲರ ಹುದ್ದೆ ನೀಡಿ ಎಂದು ಕೇಳಲು ಮುಜುಗರವಾಗುತ್ತದೆ ಎಂದು ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನ್ನನ್ನು ರಾಜ್ಯಪಾಲರನ್ನಾಗಿಸಿ ಎಂದು ಕೇಳಲು ಸಂಕೋಚ: ಡಿ.ಹೆಚ್.ಶಂಕರಮೂರ್ತಿ ಅಸಮಾಧಾನ
ಶಂಕರಮೂರ್ತಿ ಅವರು ಸತತ ಐದು ಭಾರಿ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ವಿಧಾನ ಪರಿಷತ್ನ ಸಭಾಪತಿ ಆಗಿದ್ದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಅದೇ ರಾಜ್ಯದ ವ್ಯಕ್ತಿಯನ್ನು ಅದೇ ರಾಜ್ಯದಲ್ಲಿ ರಾಜ್ಯಪಾಲರನ್ನಾಗಿ ನೇಮಿಸುವುದಿಲ್ಲ. ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕದಿಂದ ಇದುವರೆಗೂ ಯಾರನ್ನೂ ರಾಜ್ಯಪಾಲರನ್ನಾಗಿ ನೇಮಿಸಿಲ್ಲ. ನನಗೂ ಆಸೆ ಇದೆ. ಆದರೆ, ರಾಜ್ಯಪಾಲರ ಹುದ್ದೆ ನೀಡುವಂತೆ ಕೇಳಲು ಸಂಕೋಚ ಎಂದರು.
ರಾಜ್ಯಪಾಲರ ಹುದ್ದೆಗಾಗಿ ಕೇಂದ್ರಕ್ಕೆ ಒತ್ತಡ ಹೇರಲು ನನ್ನ ಕೈಲಾಗುವುದಿಲ್ಲ. ಕೇಂದ್ರ ಸರ್ಕಾರವೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸ ನನ್ನಲಿದೆ ಎಂದರು. ಶಂಕರಮೂರ್ತಿ ಅವರು ಸತತ ಐದು ಭಾರಿ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ವಿಧಾನ ಪರಿಷತ್ನ ಸಭಾಪತಿ ಆಗಿದ್ದರು.