ಕರ್ನಾಟಕ

karnataka

By

Published : May 20, 2020, 11:51 AM IST

ETV Bharat / city

ಕುಮಾರ್ ಬಂಗಾರಪ್ಪ ಬಡ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ: ಮಧು ಬಂಗಾರಪ್ಪ‌ ಕಿಡಿ

ಸೊರಬ ತಾಲೂಕಿನ ಕಾನಕೇರಿಯ ಸರ್ವೆ ನಂ. 113ರಲ್ಲಿ ವಾಸಿಸುತ್ತಿರುವ ಬಡ ಜನರ ಮನೆಗಳನ್ನು ತೆರವುಗೊಳಿಸಲು ಮುಂದಾಗಿರುವ ಶಾಸಕ ಕುಮಾರ್ ಬಂಗಾರಪ್ಪ ಅವರ ನಡೆ ಅಕ್ಷಮ್ಯವಾಗಿದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.

former minister madhu bangarappa statement
ಕುಮಾರ್ ಬಂಗಾರಪ್ಪ ಬಡ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ: ಮಧು ಬಂಗಾರಪ್ಪ‌ ಕಿಡಿ

ಶಿವಮೊಗ್ಗ: ಸೊರಬ ಪಟ್ಟಣದ ಸರ್ವೆ ನಂ. 113ರಲ್ಲಿ ವಾಸಿಸುತ್ತಿರುವ ಬಡ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿರುವ ಶಾಸಕ ಕುಮಾರ್ ಬಂಗಾರಪ್ಪ ಅವರ ನಡೆ ಅಕ್ಷಮ್ಯವಾಗಿದೆ. ಅವರಿಗೆ ಜನತೆ ಪಕ್ಷಾತೀತವಾಗಿ ಹೋರಾಟದ ಮೂಲಕವೇ ತಕ್ಕ ಉತ್ತರ ನೀಡಬೇಕು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.

ಕುಮಾರ್ ಬಂಗಾರಪ್ಪ ಬಡ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ: ಮಧು ಬಂಗಾರಪ್ಪ‌ ಕಿಡಿ

ಸೊರಬದಲ್ಲಿ ಮಾತನಾಡಿದ ಅವರು, ಕಾನಕೇರಿಯ ಸರ್ವೆ ನಂ. 113ರಲ್ಲಿ ವಾಸಿಸುತ್ತಿರುವವರು 94ಸಿಸಿ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಾರೆ. ನಾನು ಮತ್ತು ನನ್ನ ಹಿಂದಿನ ಶಾಸಕರು ಅಧಿಕಾರದಲ್ಲಿದ್ದಾಗ ಅರ್ಜಿಗಳನ್ನ ಪರಿಶೀಲಿಸಿ ಕಾನೂನು ಬದ್ಧವಾಗಿ ಅರ್ಹರಿಗೆ ಹಕ್ಕುಪತ್ರ ವಿತರಿಸಿದ್ದೆವು. ಇದೀಗ ಕಾನೂನಿನ ಅರಿವೇ ಇಲ್ಲದ ಶಾಸಕರು, ನಿವಾಸಿಗಳ ಮನೆ ಮತ್ತು ನಿವೇಶನಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ನಿವಾಸಿಗಳಿಗೂ ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಪಕ್ಷಾತೀತವಾಗಿ ಹೋರಾಟ ನಡೆಸುವ ಅವಶ್ಯಕತೆಯಿದೆ.

ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಬಡವರಿಗೆ ಗಾಯದ ಮೇಲೆ ಬರೆ ಎಳೆದಂತೆ ನಿವೇಶನಗಳನ್ನ ತೆರವುಗೊಳಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ದುರಾಹಂಕಾರ ಪ್ರದರ್ಶಿಸುತ್ತಿರುವುದು ಜನಪ್ರತಿನಿಧಿಗೆ ಶೋಭೆ ತರುವುದಿಲ್ಲ. ದ್ವೇಷದ ರಾಜಕಾರಣ ಮಾಡುತ್ತಾ ಬಡವರಿಗೆ ಸಮಸ್ಯೆಯನ್ನುಂಟು ಮಾಡುವುದೇ ಶಾಸಕರ ಕಾಯಕವಾಗಿದೆ. ಕೇವಲ ಎರಡು ವರ್ಷದಲ್ಲಿ ತಾಲೂಕು 9 ಮಂದಿ ತಹಶೀಲ್ದಾರರನ್ನ ಕಂಡಿದೆ. ಅಧಿಕಾರಿಗಳು ಕಾರ್ಯನಿರ್ವಹಿಸುವುದೇ ಕಷ್ಟವಾಗಿದ್ದು, ವರ್ಗಾವಣೆ ಬಯಸುತ್ತಿದ್ದಾರೆ ಎಂದರು.

ನಾನು ಚುನಾವಣೆಯಲ್ಲಿ ಸೋಲುಂಡಿರಬಹುದು. ಆದರೆ ಸದಾ ನಾನು ನಾಯಕನೇ. ನಿಮ್ಮ ಸಂಕಷ್ಟಗಳಿಗೆ ಜೊತೆಗಿದ್ದು, ಹೋರಾಟಕ್ಕೆ ಬೆಂಬಲ ನೀಡುತ್ತೇನೆ. ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿದ್ದರೆ ಇಂದು ಸಮಸ್ಯೆಗಳು ಬಿಗಡಾಯಿಸುತ್ತಿರಲಿಲ್ಲ. ಕಾಗೋಡು ತಿಮ್ಮಪ್ಪ ಅವರ ಪರಿಶ್ರಮದಿಂದ ಪಟ್ಟಣದ ಸರ್ಕಾರಿ ಜಾಗದಲ್ಲಿ ಅಕ್ರಮ ಮನೆಗಳನ್ನ ಸಕ್ರಮಗೊಳಿಸಲು 94 ಸಿಸಿ ಕಾಯ್ದೆಯನ್ನು ಜಾರಿಗೆ ತಂದರು. ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ತೃಪ್ತಿ ನನಗೆ ಇದೆ. ಬಿಡಿಎ ನಿವೇಶನಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವವರಿಗೆ ಸಕ್ರಮಗೊಳಿಸಲು ಸರ್ಕಾರವೇ ತೀರ್ಮಾನಿಸಿದೆ. ಆಡಳಿತಾರೂಢ ಪಕ್ಷದ ಶಾಸಕರು ಕಾನೂನಿನ ಅರಿವಿಲ್ಲದಂತೆ ವರ್ತಿಸುತ್ತಿರುವುದು ತಾಲೂಕಿನ ದುರ್ದೈವ ಎಂದರು.

ಇನ್ನು ಕೊರೊನಾ ಮಹಾಮಾರಿಗೆ ದೇಶವೇ ಬೆಚ್ಚಿಬಿದ್ದಿದೆ. ತಾಲೂಕಿನಲ್ಲಿ ಕೊರೊನಾ ವಾರಿಯರ್ಸ್​ಗೆ ಎಸ್. ಬಂಗಾರಪ್ಪ ಫೌಂಡೇಶನ್ ವತಿಯಿಂದ ಅಗತ್ಯ ಪರಿಕರಗಳನ್ನು ವಿತರಿಸುವ ಜೊತೆಗೆ ಬಡವರಿಗೆ ದಿನಸಿ ಕಿಟ್‍ಗಳನ್ನು ಸಹ ವಿತರಿಸಲಾಗಿದೆ. ಸಂಕಷ್ಟದಲ್ಲಿರುವವರಿಗೆ ಕೈಲಾದ ಸೇವೆ ಮಾಡಲಾಗಿದೆ ಎಂದರು.

ABOUT THE AUTHOR

...view details