ಶಿವಮೊಗ್ಗ :ರಾಜ್ಯ ಸರ್ಕಾರ ಕೊರೊನಾ ಇಲ್ಲದ ವೇಳೆ ಎಲ್ಲವನ್ನು ಮುಚ್ಚಿ, ಈಗ ಕೊರೊನಾ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಎಲ್ಲವನ್ನು ತೆಗೆಯಲು ಹೊರಟಿದೆ. ಅದರಲ್ಲೂ ಸರ್ಕಾರ ಶಾಲೆ ತೆರೆದು ಮಕ್ಕಳ ವಿಚಾರದಲ್ಲಿ ಆಟ ಆಡಬಾರದು ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಕಿಡಿಕಾರಿದ್ದಾರೆ.
ಸರ್ಕಾರ ಶಾಲೆ ತೆರೆಯುವ ಮೂಲಕ ಮಕ್ಕಳ ವಿಚಾರದಲ್ಲಿ ಆಟ ಆಡಬಾರದು : ಕಿಮ್ಮನೆ ರತ್ನಾಕರ್ - ಕೊರೊನಾ ಸಂದರ್ಭದಲ್ಲಿ ಶಾಲೆ ಪ್ರಾರಂಭ
ಡ್ರಗ್ಸ್ ವಿಚಾರದಲ್ಲಿ ಯಾರು ತಪ್ಪು ಮಾಡಿದ್ರೂ ಅವರನ್ನು ಹಿಡಿದು ಕಾನೂನಿನ ಪ್ರಕಾರ ಸೂಕ್ತ ಶಿಕ್ಷೆ ನೀಡಬೇಕೆಂದರು. ಮೊದಲು ತನಿಖೆ ಒಬ್ಬರನ್ನು ಮಾತ್ರ ಟಾರ್ಗೇಟ್ ಮಾಡಲಾಗಿದೆ ಎಂದು ಕೊಳ್ಳಲಾಗಿತ್ತು..
![ಸರ್ಕಾರ ಶಾಲೆ ತೆರೆಯುವ ಮೂಲಕ ಮಕ್ಕಳ ವಿಚಾರದಲ್ಲಿ ಆಟ ಆಡಬಾರದು : ಕಿಮ್ಮನೆ ರತ್ನಾಕರ್ former minister kimmanne ratnakar talk about school Open](https://etvbharatimages.akamaized.net/etvbharat/prod-images/768-512-8906253-411-8906253-1600851839353.jpg)
ಸರ್ಕಾರ ಶಾಲೆ ತೆರೆಯುವ ಮೂಲಕ ಮಕ್ಕಳ ವಿಚಾರದಲ್ಲಿ ಆಟ ಆಡಬಾರದು: ಕಿಮ್ಮನೆ ರತ್ನಾಕರ್
ಸರ್ಕಾರ ಶಾಲೆ ತೆರೆಯುವ ಮೂಲಕ ಮಕ್ಕಳ ವಿಚಾರದಲ್ಲಿ ಆಟ ಆಡಬಾರದು : ಕಿಮ್ಮನೆ ರತ್ನಾಕರ್
ಈಗ ಎಲ್ಲೆಡೆ ಕೊರೊನಾ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಶಾಲೆ ತೆರೆದು ಮಕ್ಕಳನ್ನು ಇನ್ನಷ್ಟು ಅಪಾಯಕ್ಕೆ ನೂಕುವುದು ಸರಿಯಲ್ಲ ಎಂದರು. ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ವಿಚಾರದಲ್ಲಿ ಸೂಕ್ತ ತನಿಖೆ ನಡೆಸಬೇಕೆಂದು ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ.
ಡ್ರಗ್ಸ್ ವಿಚಾರದಲ್ಲಿ ಯಾರು ತಪ್ಪು ಮಾಡಿದ್ರೂ ಅವರನ್ನು ಹಿಡಿದು ಕಾನೂನಿನ ಪ್ರಕಾರ ಸೂಕ್ತ ಶಿಕ್ಷೆ ನೀಡಬೇಕೆಂದರು. ಮೊದಲು ತನಿಖೆ ಒಬ್ಬರನ್ನು ಮಾತ್ರ ಟಾರ್ಗೇಟ್ ಮಾಡಲಾಗಿದೆ ಎಂದು ಕೊಳ್ಳಲಾಗಿತ್ತು. ಈಗ ತನಿಖೆ ವಿಶಾಲವಾಗಿ ನಡೆಯುತ್ತಿದೆ ಎಂದರು.
Last Updated : Sep 23, 2020, 3:05 PM IST