ಶಿವಮೊಗ್ಗ:ನಾಲ್ಕೈದು ಗಲಭೆ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಯೇ ನಮ್ಮ ರಾಜ್ಯದ ಗೃಹ ಸಚಿವರು. ಇದು ನಮ್ಮ ರಾಜ್ಯದ ಪರಿಸ್ಥಿತಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್(Former minister Kimmane Rathnakar) ಅವರು ಗೃಹ ಸಚಿವ ಆರಗ ಜ್ಞಾನೇಂದ್ರ(Home Minister Araga Jnanendra) ವಿರುದ್ಧ ಹರಿಹಾಯ್ದಿದ್ದಾರೆ.
ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ತೀರ್ಥಹಳ್ಳಿಯ ಪ್ರತಿ ಗಲಭೆ ಪ್ರಕರಣದಲ್ಲಿ ಆರಗ ಜ್ಞಾನೇಂದ್ರ ನೇತೃತ್ವ ವಹಿಸಿದ್ದಾರೆ. ಇಂತವರು ನಮ್ಮ ರಾಜ್ಯದ ಗೃಹ ಸಚಿವರು. ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾದಾಗ ನಾನು ಸಹ ಅಭಿನಂದನೆ ಸಲ್ಲಿಸಿದ್ದೆ. ಆದರೆ ಇವರು ಮೊದಲ ಹೇಳಿಕೆಯಲ್ಲಿಯೇ ತೀರ್ಥಹಳ್ಳಿ ಮರ್ಯಾದೆ ಕಳೆದರು. ಇವರು ಕೇವಲ ತೀರ್ಥಹಳ್ಳಿಗೆ ಗೃಹ ಸಚಿವರಾಗಿದ್ದಾರೆಯೇ ಹೊರತು ರಾಜ್ಯದ ಗೃಹ ಸಚಿವರಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.